ನವದೆಹಲಿ, ಜೂ 14 (DaijiworldNews/PY): 2022ರ ಗುಜರಾತ್ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಅವರು, "ನಾನು ನಾಳೆ ಗುಜರಾತ್ಗೆ ಬರುತ್ತಿದ್ದೇನೆ. ಹಾಗೂ ಗುಜರಾತ್ನ ಎಲ್ಲಾ ಸಹೋದರ-ಸಹೋದರಿಯರನ್ನು ಭೇಟಿಯಾಗುತ್ತೇನೆ. ಗುಜರಾತ್ ಈಗ ಬದಲಾಗಲಿದೆ" ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಭೇಟಿಯ ವೇಳೆ ಅವರು ಅಹಮದಾಬಾದ್ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಇದು ಕೇಜ್ರಿವಾಲ್ ಅವರ ಗುಜರಾತ್ ಪ್ರವಾಸವಾಗಿದೆ, ಫೆಬ್ರವರಿಯಲ್ಲಿ ಅವರು ಸೂರತ್ಗೆ ಭೇಟಿ ನೀಡಿದ್ದರು.