ಬೆಂಗಳೂರು, ಜೂ. 13 (DaijiworldNews/SM): ಕರ್ನಾಟಕದ ನಾಯಕತ್ವ ವಿವಾದ ಸಂಪೂರ್ಣವಾಗಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ದಿನಕ್ಕೊಂಡು ಹೊಸ ಬಣ್ಣ ಪಡೆಯುತ್ತಿದೆ. ಸಿಎಂ ಸ್ಥಾನದಲ್ಲಿ ಯದಿಯೂರಪ್ಪ ಮುಂದುವರೆಯುತ್ತಾರಾ ಎನ್ನುವುದು ಜೂನ್ 18ರ ನಂತರ ಸ್ಪಷ್ಟಗೊಳ್ಳಲಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕೆಂದು ಬಿಜೆಪಿ ಶಾಸಕರು ತಮ್ಮ ಬೆಂಬಲಿಗರ ಸಹಿಯನ್ನು ಸಹ ಸಂಗ್ರಹಿಸಿದ್ದರು. ರಾಷ್ಟ್ರ ಮಟ್ಟದಲ್ಲಿ ಅವಕಾಶ ನಿಡಿದ್ದಲ್ಲಿ ಹೋಗುವುದಕ್ಕೆ ಸಿದ್ದ ಎನ್ನುವ ವಿಚಾರ ಯಡಿಯೂರಪ್ಪ ತಿಳಿಸಿದ್ದರು. ಆದರೆ ಸದ್ಯಕ್ಕೆ ಕರ್ನಾಟಕದ ಮುಖ್ಯಮಂತ್ರಿಯನ್ನು ಬದಲಿಸಲು ಆಸಕ್ತಿ ಇಲ್ಲ ಎಂಬ ವಿವೇಚನೆಯ ಹೇಳಿಕೆಯನ್ನು ಹೈಕಮಾಂಡ್ ನೀಡಿದೆ. ಈ ಬೆಳವಣಿಗೆಗಳ ನಂತರವೂ ಈ ವಿಷಯ ಮತ್ತೆ ಹೊಗೆಯಾಡುತ್ತಿದೆ. ಕರ್ನಾಟಕ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಿಜೆಪಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಅರುಣ್ ಸಿಂಗ್ ಈ ವಿಷಯದ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ವಿವಿಧ ಒತ್ತಡದಿಂದಾಗಿ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲದೆ ಸಚಿವರ ಸಭೆ ಕರೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯುವಂತೆ ಹಲವಾರು ಶಾಸಕರು ಅವರನ್ನು ವಿನಂತಿ ಮಾಡಿದ್ದರು. ಒತ್ತಡದಲ್ಲಿ ಅರುಣ್ ಸಿಂಗ್ ಜೂನ್ 17 ರಂದು ಶಾಸಕರ ಸಭೆ ಕರೆಯಬಹುದು ಎಂದು ಹೇಳಲಾಗಿದೆ.
ಬಿಜೆಪಿಯೊಳಗೆ, ಜೂನ್ 17 ರಂದು ನಡೆಯಬಹುದಾದ ಸಭೆಗೆ ಸಿದ್ಧತೆಗಳು ನಡೆಯುತ್ತಿವೆ ಮತ್ತು ಸಚಿವರ ಸಭೆ ಜೂನ್ 16 ಕ್ಕೆ ನಿಗದಿಯಾಗಿದೆ. ಜೂನ್ 18 ರಂದು ಕೋರ್ ಕಮಿಟಿ ಸಭೆ ನಡೆಯಲಿದೆ. ಸಿಂಗ್ ಈ ಎಲ್ಲ ಸಭೆಗಳಿಂದ ಮಾಹಿತಿ ಮತ್ತು ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ನಂತರ ಪಕ್ಷದ ಹೈಕಮಾಂಡ್ಗೆ ವರದಿ ಕಳುಹಿಸಲಿದ್ದಾರೆ. ಜೂನ್ 18ರ ನಂತರ ಅವರು ಕಳುಹಿಸಲಿರುವ ವರದಿಯ ಆಧಾರದ ಮೇಲೆ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರ ಭವಿಷ್ಯದ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಲಾಗಿದೆ.
ಮೂರರಿಂದ ನಾಲ್ಕು ದಿನಗಳ ಹಿಂದೆ ಅವರು ನೀಡಿದ ಹೇಳಿಕೆಯಲ್ಲಿ, ಯಡಿಯೂರಪ್ಪನನ್ನು ಯಾವುದೇ ಕಾರಣದಲ್ಲೂ ಬದಲಾಯಿಸಲಾಗುವುದಿಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಅಲ್ಲದೆ, ಯಡಿಯುರಪ್ಪ ಅವರು ಇನ್ನೂ ಎರಡು ವರ್ಷಗಳ ಕಾಲ ಈ ಸ್ಥಾನದಲ್ಲಿ ಇರುತ್ತಾರೆ ಎಂದು ಹೇಳಿದ್ದರು. ಯಡಿಯೂರಪ್ಪ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದರು. ಈ ಮಾತುಗಳು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಅವರ ವಿಶ್ವಾಸ ನಿಜವಾಗುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಈ ಎಲ್ಲಾ ವಿಚಾರಗಳ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆಗೆ ಸದ್ದಿಲ್ಲದೆ ಸಿದ್ಧತೆ ನಡೆಸಲಾಗುತ್ತಿದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.