ನವದೆಹಲಿ, ಜೂ 13 (DaijiworldNews/PY): "ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇಲ್ಲಿಯವರೆಗೆ 26 ಕೋಟಿ ಡೋಸ್ಗೂ ಹೆಚ್ಚು ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡಲಾಗಿದೆ" ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.
"ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ, ಭಾರತದ ಸರ್ಕಾರದ ಉಚಿತ ದರ ಹಾಗೂ ರಾಜ್ಯಗಳಿಂದ ನೇರವಾದ ಖರೀದಿ ಹಂತದಲ್ಲಿ ಇಲ್ಲಿಯವರೆಗೆ ಸುಮಾರು 26,64,84,350 ಡೋಸ್ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಇದರಲ್ಲಿ ವ್ಯರ್ಥ ಲಸಿಕೆ ಸೇರಿದಂತೆ 25,12,66,637 ಡೋಸ್ ಬಳಕೆಯಾಗಿದೆ" ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.
"ಈಗಲೂ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಲ್ಲಿ 1.53 ಕೋಟಿ ಗೂ ಹೆಚ್ಚು ಡೋಸ್ ಲಸಿಕೆಗಳಿವೆ. 4 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಪೈಪ್ಲೈನ್ನಲ್ಲಿದ್ದ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುಂದಿನ ಮೂರು ದಿನಗಳೊಳಗೆ ಲಸಿಕೆ ಪಡೆಯಲಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
"ಕೊರೊನಾ ಲಸಿಕಾ ಅಭಿಯಾನದಡಿ ಈವರೆಗೆ 25,31,95,048 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ" ಎಂದು ಮಾಹಿತಿ ನೀಡಿದೆ.