ಬೆಂಗಳೂರು, ಜೂ. 13 (DaijiworldNews/HR): "ದಿಗ್ವಿಜಯ ಸಿಂಗ್ ಅವರಿಗೆ ವಯಸ್ಸಾಗಿದೆ, ಹಾಗಾಗಿ ಏನೇನು ಬಡಬಡಿಸಲಾರಂಭಿಸಿದ್ದು, ಕೆಲವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದ 370ನೇ ವಿಧಿ ರದ್ದು ಮರು ಪರಿಶೀಲನೆ ಕುರಿತು ದಿಗ್ವಿಜಯ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಈಗಾಗಲೇ ಅನೇಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕೇರಳ, ತಮಿಳುನಾಡಿನಲ್ಲಿ ಅಧ್ಯಾಯ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಗೆ ವಿಳಾಸವೇ ಇಲ್ಲದಂತಾಗಿದೆ. ಆದರೂ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ" ಎಂದರು.
ಇನ್ನು "ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರಿಗೆ ವಯಸ್ಸಾಗಿದೆ. ಹಾಗಾಗಿ ಏನೇನು ಬಡಬಡಿಸಲಾರಂಭಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂತಹ ದೇಶ ವಿರೋಧಿ ಹೇಳಿಕೆಯನ್ನು ಸಹಿಸಲಾಗುವುದಿಲ್ಲ" ಎಂದಿದ್ದಾರೆ.
"ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಸ್ನೇಹಿತರೆ ಇಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ವ್ಯಾಕ್ಸಿನ್ ಪೂರೈಕೆಗೆ ಬೇಡಿಕೆಯಿಟ್ಟಿದ್ದಾರೆ" ಎಂದು ಹೇಳಿದರು.