ತ್ರಿಶೂರ್, ಜೂ. 13 (DaijiworldNews/HR): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಪ್ರಚೋದನೆ ನೀಡಿದ ಆರೋಪದ ಮೇಲೆ ಟಿಕ್ ಟಾಕ್ ಸ್ಟಾರ್ ಒಬ್ಬನನ್ನು ಬಂಧಿಸಿದ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಅಂಬಿಲಿ ಅಕಾ ವಿಘ್ನೇಶ್ ಕೃಷ್ಣ(19) ಎಂದು ಗುರುತಿಸಲಾಗಿದೆ.
ಬಂಧಿತನ ವಿರುದ್ದ ಪೊಲೀಸರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ವಿಘ್ನೇಶ್ ಕೃಷ್ಣ ಕಳೆದ ವರ್ಷ ಬಾಲಕಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡಿದ್ದು ಆ ಬಳಿಕ ಅವರು ಭೇಟಿಯಾಗಲು ಪ್ರಾರಂಭಿಸಿದರು. ನಂತರ ವಿಘ್ನೇಶ್ ಕೃಷ್ಣ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು, ಅವಳನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಬಾಲಕಿ ಗರ್ಭಿಣಿ ಎಂದು ತಿಳಿದಾಗ, ಆಕೆಯ ಪೋಷಕರು ಅವನ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿದ ಬಳಿಕ ಪೊಲೀಸರು ಅವನನ್ನು ಹುಡುಕುತ್ತಿದ್ದಾಗ ವಿಘ್ನೇಶ್ ಕೃಷ್ಣ ತಲೆಮರೆಸಿಕೊಂಡನು. ಈ ಮಧ್ಯೆ, ವಿಘ್ನೇಶ್ ಕೃಷ್ಣ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದರು, ಇದು ವಿದೇಶಕ್ಕೆ ತೆರಳುವ ಅವರ ಯೋಜನೆಯನ್ನು ಸೂಚಿಸುತ್ತದೆ.
ಆರೋಪಿಯನ್ನು ಬಂಧಿಸಲು, ಪೊಲೀಸರು ಅವನ ಪಾಸ್ ಪೋರ್ಟ್ ಸಿದ್ಧವಾಗಿದೆ ಎಂದು ಅವನ ಕುಟುಂಬಕ್ಕೆ ಹೇಳಿದ್ದು, ಶನಿವಾರ ಅವರ ತಂದೆ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೋಗಿ ವಿಘ್ನೇಶ್ ಕೃಷ್ಣ ಅವರ ಪಾಸ್ ಪೋರ್ಟ್ ಬಗ್ಗೆ ಮಾಹಿತಿ ಪಡೆದರು.
ಪೊಲೀಸರು ತಂದೆಯನ್ನು ಹಿಂಬಾಲಿಸಿ ವಿಘ್ನೇಶ್ ಕೃಷ್ಣನನ್ನು ಬಂಧಿಸಿದ್ದಾರೆ.