ಶಿರಸಿ, ಜೂ. 13 (DaijiworldNews/HR): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ರ್ಯಾಂಕ್ ಬರಬೇಕು ಎಂದು ಓದುತ್ತಿದ್ದ ವಿದ್ಯಾರ್ಥಿನಿರ್ಯೋಳು ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿ ಪ್ರಥಮ ಪಿಯುಸಿ ಅಂಕದ ಮೇಲೆ ದ್ವಿತೀಯ ಪಿಯು ಫಲಿತಾಂಶ ನೀಡಲಾಗುತ್ತದೆ ಎಂದು ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಆತ್ಮಹತ್ಯೆ ಮಾಡಿಕೊಂದ ವಿದ್ಯಾರ್ಥಿನಿಯನ್ನು ಶಿರಸಿ ತಾಲೂಕಿನ ಯಡಹಳ್ಳಿ ಸಮೀಪದ ಸಹಸ್ರಳ್ಳಿಯ ನಿವಾಸಿ, ಮೂಲತಃ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯ ಜಿ.ಧನ್ಯಾ (18) ಎಂದು ಗುರುತಿಸಲಾಗಿದೆ.
ಶಿರಸಿಯ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಧನ್ಯಾ , ಕೊರೊನಾದಿಂದ ಕಾಲೇಜು ಬಂದ್ ಆಗಿದ್ದರೂ ಆನ್ಲೈನ್ ಮೂಲಕ ನಿರಂತರ ಅಭ್ಯಾಸ ಮಾಡುತ್ತಿದ್ದಳು.
ಇನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣಿಗೆ ಶರಣಾಗಿದ್ದಾಳೆ.
ಮೃತ ಯುವತಿಯ ತಂದೆ ಗಂಗಾಧರ ದೇವಪ್ಪ ಆಚಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.