ಬೆಂಗಳೂರು, ಜೂ. 13 (DaijiworldNews/HR): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕದ ವೀರಶೈವ ಮುಖಂಡ ಅರವಿಂದ ಬೆಲ್ಲದ್ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿಯ ಹೈಕಮಾಂಡ್ ಸೂಚಿಸಿದಂದು ತಾವು ಸಿಎಂ ಹುದ್ದೆಯಿಂದ ಕೆಳಗೆ ಇಳಿದು ರಾಜ್ಯದ ಜನರ ಸೇವೆಯನ್ನು ಮಾಡುತ್ತೇನೆ ಎಂದಿದ್ದ ಸಿಎಂ ಯಡಿಯೂರಪ್ಪ ಬಳಿಕ ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿ ಎಂಬುದಾಗಿ ಬಿಎಸ್ ಯಡಿಯೂರಪ್ಪ ಹೇಳುವ ಮೂಲಕ, ಸಿಎಂ ಬದಲಾವಣೆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು.
ಇದರ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ಅವರು ದೆಹಲಿಗೆ ಹೋಗಿದ್ದು ವೈಯಕ್ತಿಕ ಕಾರಣಗಳಿಂದಲೂ ದೆಹಲಿಗೆ ಹೋಗಿದ್ದೆ ಎಂದು ಅರವಿಂದ ಬೆಲ್ಲದ್ ಸ್ಪಷ್ಟ ಪಡಿಸಿದ್ರೂ, ಅವರ ಬೆಂಬಲಿಗರ ಮೂಲಕ, ಈಗ ಮತ್ತೊಂದು ತಿರುವನ್ನು ಪಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಶಾಸಕ ಅರವಿಂದ ಬೆಲ್ಲದ್ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಪೋಸ್ಟ್ ಹಾಕಲಾಗುತ್ತಿದ್ದು, ವೈರಲ್ ಕೂಡ ಆಗಿದೆ.