ಪಣಜಿ, ಜೂ. 13 (DaijiworldNews/HR): ಒಂದು ವರ್ಷದ ಮಗುವನ್ನು ಗೋವಾ ವೈದ್ಯಕೀಯ ಕಾಲೇಜಿನಿಂದ ಅಪಹರಿಸಿದ್ದ ಮಹಿಳೆಯನ್ನು ಪತ್ತೆ ಹಚ್ಚಿ ಗೋವಾ ಪೋಲಿಸರು ಮಗುವನ್ನು ರಕ್ಷಿಸಿದ್ದಾರೆ.
ಒಂದು ತಿಂಗಳ ಮಗುವನ್ನು ಅಪರಿಸಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಕಾರ್ಯ ಕೈಗೊಂಡ ಪೋಲಿಸರು ಆರೋಪಿ ಮಹಿಳೆಯನ್ನು ಉತ್ತರ ಗೋವಾದ ವಾಳಪೈ ಸಲೆಲಿ ಗ್ರಾಮದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಗೋವಾ ಮೆಡಿಕಲ್ ಕಾಲೇಜಿಗೆ ಓರಿಸ್ಸಾ ಮೂಲದ ಮಹಿಳೆಯೋರ್ವಳು ಒಂದು ತಿಂಗಳ ಮಗುವಿನ ಪೋಲಿಯೊ ಡೋಸ್ ಹಾಕಿಸಲು ಬಂದಿದ್ದಳು. ಆಗ ಅಪರಿಚಿತ ಮಹಿಳೆಯೋರ್ವಳು ಈಕೆಯ ಗೆಳೆತನ ಬೆಳೆಸಿ ತಿನ್ನಲು ಏನಾದರೂ ತರುತ್ತೇನೆ ನನ್ನ ಮಗುವನ್ನು ನೋಡಿಕೊ ಎಂದು ತಾಯಿಯು ಮಗುವನ್ನು ಅಪರಿಚಿತಳ ಕೈಗೆ ಕೊಟ್ಟು ಎದುರಲ್ಲೇ ಇದ್ದ ಅಂಗಡಿಗೆ ತೆರಳಿದಾಗ ಮಗುವನ್ನು ಅಪಹರಿಸಲಾಗಿತ್ತು.