ಬೆಂಗಳೂರು, ಜೂ.12 (DaijiworldNews/HR): ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಉತ್ಪಾದಿಸಿರುವ ಮೂರು ಸುಧಾರಿತ ಲೈಟ್ ಹೆಲಿಕಾಪ್ಟರ್ ಎಎಲ್ಹೆಚ್ ಎಂಕೆ -3 ಅನ್ನು ಭಾರತೀಯ ನೌಕಾ ಪಡೆಗೆ ಶನಿವಾರ ಸೇರ್ಪಡೆ ಮಾಡಲಾಗಿದೆ.
ಎಎಲ್ಹೆಚ್ ಎಂಕೆ -3 ಪ್ರೋಗ್ರಾಂನ ಭಾಗವಾಗಿರುವ ಈ ಹೆಲಿಕಾಪ್ಟರ್ಗಳನ್ನು ಭುವನೇಶ್ವರ, ಪೋರ್ಬಂದರ್, ಚೆನ್ನೈ ಮತ್ತು ಕೊಚ್ಚಿಯಲ್ಲಿ ಇರಿಸಲಾಗುವುದು ಮತ್ತು ಇವು ವಿವಿಧ ಕೋಸ್ಟ್ ಗಾರ್ಡ್ ಏವಿಯೇಷನ್ ಸ್ಕ್ವಾಡ್ರನ್ಗಳ ಭಾಗವಾಗಲಿವೆ ಎಂದು ಎಚ್ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ದೆಹಲಿಯ ಭಾರತೀಯ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಯಲ್ಲಿ ಮತ್ತು ಬೆಂಗಳೂರಿನ ಎಚ್ಎಎಲ್ನ ಹೆಲಿಕಾಪ್ಟರ್ ಎಂಆರ್ಒ ವಿಭಾಗದಲ್ಲಿ ಏಕಕಾಲದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಅವರ ಸಮ್ಮುಖದಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆದಿದೆ.
ಈ ಸಂದರ್ಭದಲ್ಲಿ ಭಾರತೀಯ ಕೋಸ್ಟ್ಗಾರ್ಡ್ನ ಮಹಾನಿರ್ದೇಶಕ ಕೆ.ನಟರಾಜನ್ ಮತ್ತು ಸಿಎಮ್ಡಿ, ಎಚ್ಎಎಲ್ನ ಆರ್ ಮಾಧವನ್ ಉಪಸ್ಥಿತರಿದ್ದರು.