ಪಣಜಿ,ಜೂ.12 (DaijiworldNews/HR): ಒಂದು ತಿಂಗಳ ಮಗುವನ್ನು ಅಪರಿಚಿತರು ಅಪಹರಿಸಿದ ಘಟನೆ ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದಿದೆ.
ಒಂದು ತಿಂಗಳ ಮಗುವನ್ನು ಅಪರಿಸಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಆಗಶಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೋವಾ ಮೆಡಿಕಲ್ ಕಾಲೇಜಿಗೆ ಓರಿಸ್ಸಾ ಮೂಲದ ಮಹಿಳೆಯೋರ್ವಳು ಒಂದು ತಿಂಗಳ ಮಗುವಿನ ಪೋಲಿಯೊ ಡೋಸ್ ಹಾಕಿಸಲು ಬಂದಿದ್ದಳು. ಆಗ ಅಪರಿಚಿತ ಮಹಿಳೆಯೋರ್ವಳು ಈಕೆಯ ಗೆಳೆತನ ಬೆಳೆಸಿ ತಿನ್ನಲು ಏನಾದರೂ ತರುತ್ತೇನೆ ನನ್ನ ಮಗುವನ್ನು ನೋಡಿಕೊ ಎಂದು ತಾಯಿಯು ಮಗುವನ್ನು ಅಪರಿಚಿತಳ ಕೈಗೆ ಕೊಟ್ಟು ಎದುರಲ್ಲೇ ಇದ್ದ ಅಂಗಡಿಗೆ ತೆರಳಿದಾಗ ಮಗುವನ್ನು ಅಪಹರಿಸಲಾಗಿದೆ ಎನ್ನಲಾಗಿದೆ.
ಇನ್ನು ಈ ಘಟನೆಯಿಂದಾಗಿ ರಾಜ್ಯದಲ್ಲಿ ಆಸ್ಪತ್ರೆಗಳು ಸುರಕ್ಷಿತವಾಗಿಲ್ಲ ಎಂಬುದು ಖಚಿತವಾಗಿದ್ದು, ಮಗುವನ್ನು ಅಪಹರಿಸಿದವರನ್ನು ಪೋಲಿಸರು ಕೂಡಲೇ ಬಂಧಿಸಬೇಕು ಎಂದು ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.