ನವದೆಹಲಿ, ಜೂ.12 (DaijiworldNews/HR): ಕೊರೊನಾದ ಅಗತ್ಯ ವಸ್ತುಗಳ ಮೇಲಿನ ದರಗಳನ್ನು ಶೇ.5ಕ್ಕೆ ಕಡಿತಗೊಳಿಸಲಾಗಿದೆ ಎಂದು ಇಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೊರೊನಾ ಅಗತ್ಯ ಪೂರೈಕೆಗಳ ಮೇಲಿನ ದರಗಳನ್ನು ಶೇಕಡಾ 18 ಮತ್ತು ಶೇಕಡಾ 12 ರಿಂದ ಶೇಕಡಾ 5ಕ್ಕೆ ಕಡಿತಗೊಳಿಸಲು ಜಿಎಸ್ಟಿ ಕೌನ್ಸಿಲ್ ಶುಕ್ರವಾರ ಒಪ್ಪಿಕೊಂಡಿದೆ.
ಇನ್ನು ಆಂಬ್ಯುಲೆನ್ಸ್ ಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 12ಕ್ಕೆ ಮತ್ತು ವಿದ್ಯುತ್ ಕುಲುಮೆಗಳು ಮತ್ತು ತಾಪಮಾನ-ತಪಾಸಣಾ ಉಪಕರಣಗಳ ಮೇಲೆ ಶೇಕಡಾ 5ಕ್ಕೆ ಇಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಸಚಿವರ ಗುಂಪು ಶಿಫಾರಸು ಮಾಡಿದ ಆಗಸ್ಟ್ ಅಂತ್ಯದವರೆಗೆ ಈ ದರಗಳು ಸೆಪ್ಟೆಂಬರ್ ವರೆಗೆ ಮಾನ್ಯವಾಗಿರುತ್ತವೆ ಎಂದು 44ನೇ ಜಿಎಸ್ಟಿ ಮಂಡಳಿ ಸಭೆಯ ಬಳಿಕ ತಿಳಿಸಿದ್ದಾರೆ.