ಲಕ್ಷದ್ವೀಪ, ಜೂ.12 (DaijiworldNews/HR): ದೇಶ ವಿರೋಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕಿ ಆಯಿಷಾ ಸುಲ್ತಾನ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ 15 ಜನ ಸ್ಥಳೀಯ ಬಿಜೆಪಿ ನಾಯಕರು ದೇಶದ್ರೋಹ ಕೇಸ್ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಯಿಷಾ ಸುಲ್ತಾನ್ ಅವರು ಮಲಯಾಳಂ ಟಿ.ವಿ ಚಾನೆಲ್ನಲ್ಲಿ ನಡೆದ ಚರ್ಚೆಯಲ್ಲಿ ಲಕ್ಷದ್ವೀಪದಲ್ಲಿ ಕೊರೊನಾ ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಆರೋಪಿಸಿದ್ದರು.
ಇನ್ನು ಇವರ ಹೇಳಿಕೆಯನ್ನು ಬಿಜೆಪಿಯ ಕೆಲ ನಾಯರು ವಿರೋಧಿಸಿದ್ದು, ಜೊತೆಗೆ ಆಯೆಷಾ ವಿರುದ್ಧ ದೇಶ ವಿರೋಧಿ ಕೃತ್ಯ ಎಸಗಿದ್ದಾರೆಂದು ಬಿಜೆಪಿ ದೂರಿದ್ದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ಮುಖಂಡರ ದೂರಿನ ಅನ್ವಯ ಆಯಿಷಾ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಆಯಿಷಾ ವಿರುದ್ಧ ದೂರು ದಾಖಲಿಸಿರುವುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, 15 ಕ್ಕೂ ಅಧಿಕ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.