ಬೆಂಗಳೂರು, ಜೂ.11 (DaijiworldNews/HR): ಕರ್ನಾಟಕದಲ್ಲಿ ಘೋಷಿಸಿದ್ದ ಲಾಕ್ಡೌನ್ ಅನ್ನು ಜೂನ್ 14ರಿಂದ ಒಂದೂವರೆ ತಿಂಗಳ ಬಳಿಕ ಕೆಲ ನಿರ್ಬಂಧಗಳೊಂದಿಗೆ ಅನ್ಲಾಕ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಜೂನ್ 14ರಿಂದ 21ರವರೆಗೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು ದೈನಂದಿನ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ್ದು, ಪರಿಸ್ಥಿತಿ ಅವಲೋಕಿಸಿ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತದೆ.
ಇನ್ನು ಅನ್ಲಾಕ್ ಮಾಡಿದ ಜಿಲ್ಲೆಗಳಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ.
ಕೊರೊನಾ ಸೋಂಕು ಕಡಿಮೆಯಾಗದ 11 ಜಿಲ್ಲೆಗಳಲ್ಲಿ ನಿರ್ಬಂಧ ಮಾರ್ಗಸೂಚಿಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರಲ್ಲ.
ಕರ್ನಾಟಕದ 19 ಜಿಲ್ಲೆಯಗಳಲ್ಲಿ ಮೊದಲ ಹಂತದ ಸಡಿಲಿಕೆ ಮಾಡಿದ್ದು, ಅಲ್ಲಿನ ಹೊಸ ಮಾರ್ಗಸೂಚಿಗಳು ಇಂತಿವೆ:
ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಕನ್ನಡಕದ ಅಂಗಡಿ ತೆರೆಯಬಹುದು
ಸ್ಟೀಲ್, ಸಿಮೆಂಟ್ ಅಂಗಡಿ ತೆರೆಯಲು 6ರಿಂದ 2 ಗಂಟೆಯವರೆಗೆ ಅವಕಾಶ
ಆಹಾರ, ಹಣ್ಣು ತರಕಾರಿ, ಮಾಂಸ, ಮೀನು, ಡೈರಿ ಪ್ರಾಡೆಕ್ಟ್, ದಿನಸಿ ಅಂಗಡಿಗಳು ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಓಪನ್
ಎಲ್ಲಾ ಕಾರ್ಖಾನೆಗಳು ಶೇ. 50ರಷ್ಟು ಸಿಬ್ಬಂದಿ ಕೆಲಸಕ್ಕೆ ಅವಕಾಶ
ಗಾರ್ಮೆಂಟ್ಸ್ ಗಳಲ್ಲಿ ಶೇ. 30ರಷ್ಟು ಸಿಬ್ಬಂದಿಗೆ ದುಡಿಯಲು ಅವಕಾಶ
ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ವಾಯುವಿಹಾರಕ್ಕಾಗಿ ಪಾರ್ಕ್ಗಳ ತೆರವಿಗೆ ಅವಕಾಶ
ಆಟೋ, ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ.