ಬೆಂಗಳೂರು, ಜೂ.11 (DaijiworldNews/HR): ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿನಿಮಾ, ಪತ್ರಿಕೋದ್ಯಮದಲ್ಲಿ 80ರ ದಶಕದಿಂದ ಕಾರ್ಯನಿರ್ವಹಿಸಿದ್ದ ಸುರೇಶ್ ಚಂದ್ರ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಅನೇಕ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಚಂದ್ರ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಸುರೇಶ್ ಚಂದ್ರ ಅವರು ಕನ್ನಡ ಚಿತ್ರರಂಗದ ಹಿರಿಯ ನಟರಾದ ಶಂಕರ್ ನಾಗ್, ವಿಷ್ಣು ವರ್ಧನ್, ಅಂಬರೀಶ್ ಅವರೊಂದಿಗೆ ಆತ್ಮೀಯ ಒಡನಾಟಹೊಂದಿದ್ದರು.