ನವದೆಹಲಿ, ಜೂ.11 (DaijiworldNews/HR): ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನರ್ರಚನೆ ಸುದ್ದಿ ಹರಿದಾಡುತ್ತಿರುವ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿದ್ದಾರೆ.
ಯೋಗಿ ಆದಿತ್ಯನಾಥ್ ಎರಡು ದಿನಗಳ ದೆಹಲಿ ಪ್ರವಾಸ ಆರಂಭಿಸಿದ್ದು,ಈ ಪ್ರವಾಸದಲ್ಲಿ ಕೇಂದ್ರ ಸಚಿವರು, ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಆದಿತ್ಯನಾಥ್ ಅವರು ಪಕ್ಷದ ಹಿರಿಯ ನಾಯಕರ ಭೇಟಿ ಕುತೂಹಲ ಉಂಟು ಮಾಡಿದೆ.
ಇನ್ನು ಪ್ರಧಾನಿ ಮೋದಿ ಭೇಟಿಗೂ ಮುನ್ನ ಯೋಗಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ವಲಸೆ ಸಮಸ್ಯೆಗೆ ಪರಿಹಾರ ಕುರಿತ ವರದಿಯೊಂದನ್ನು ಸಲ್ಲಿಸಿದರು. ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಜಿತಿನ್ ಪ್ರಸಾದ್ ಅವರು ಯೋಗಿ ಅವರನ್ನು ಭೇಟಿಯಾಗಿದ್ದಾರೆ.