ನವದೆಹಲಿ, ಜೂ 09 (DaijiworldNews/MS): ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಜೂನ್ 11ರಂದು ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಪೆಟ್ರೋಲ್ ಬಂಕ್ಗಳ ಮುಂದೆ ನಾಲ್ಕು ಗಂಟೆಗಳ (ಬೆಳಿಗ್ಗೆ 7 ರಿಂದ 11 ರವರೆಗೆ) ಧರಣಿಯನ್ನು ನಡೆಸಲಿದೆ ಎಂದು ಪಕ್ಷ ಹೇಳಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮೇ 4 ರಿಂದ ಇದುವರೆಗೂ ಒಟ್ಟು 20 ಬಾರಿ ಪೆಟ್ರೋಲ್ ದರವನ್ನು ಏರಿಕೆ ಮಾಡಲಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 13 ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 23.72 ರೂ ಮತ್ತು ಡೀಸೆಲ್ ಬೆಲೆ 29.93 ರೂ.ಗೆ ಏರಿದೆ . ಕರೋನಾ ಸಾಂಕ್ರಾಮಿಕವು ಲಕ್ಷಾಂತರ ಜನರ ಜೀವನೋಪಾಯವನ್ನು ಹಾಳುಮಾಡಿದೆ, ಆದರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವಲ್ಲಿ ಕೇಂದ್ರದ ಮೋದಿ ಸರ್ಕಾರವನ್ನು ಕೊರೊನಾವೂ ತಡೆಯಲಿಲ್ಲ" ಎಂದು ಕಾಂಗ್ರೆಸ್ ವಕ್ತಾರರರೂ ದೂರಿದ್ದಾರೆ.
ತೈಲ ಬೆಲೆ ಏರಿಕೆ ಕುರಿತು ಮಾತನಾಡಿರುವ ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, 'ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಕಚ್ಚಾತೈಲ ದರ ಹೆಚ್ಚಳವಾಗಿರುವುದೇ ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಕಾರಣ' ಎಂದು ಹೇಳಿದ್ದರು್'ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿರುವ ಕುರಿತು ಜಿಎಸ್ಟಿ ಮಂಡಳಿ ತೀರ್ಮಾನಿಸಬೇಕು. ಒಂದು ವೇಳೆ ಜಿಎಸ್ಟಿ ವ್ಯಾಪ್ತಿಗೆ ಬಂದರೆ ದರಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ' ಎಂದು ಸಚಿವರು ತಿಳಿಸಿದ್ದರು.