ಬೆಂಗಳೂರು, ಜೂ. 08(DaijiworldNews/SM): ರಾಜ್ಯದಲ್ಲಿ ಮಂಗಳವಾರ ಕೊರೋನಾ ಸೋಂಕು ಹತ್ತು ಸಾವಿರಕ್ಕಿಂತಲೂ ಕಡಿಮೆಯಾಗಿದ್ದು, 9808 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಇನ್ನೊಂದೆಡೆ ಮರಣ ಪ್ರಮಾಣ ಕೂಡ ಇಳಿಕೆಯಾಗಿದೆ. ಮಂಗಳವಾರದಂದು 179 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
23449 ಮಂದಿ ಮಂಗಳವಾರ ಗುಣಮುಖರಾಗಿದ್ದು, ಆ ಮೂಲಕ ಒಟ್ಟು 2460165 ಮಂದಿ ಗುಣಮುಖರಾದಂತಾಗಿದೆ. ಇನ್ನು ಇಲ್ಲಿಯ ತನಕ ಒಟ್ಟು 2717289 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 2460165 ಮಂದಿ ಗುಣಮುಖರಾಗಿದ್ದರೆ, 32099 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. 225004 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.