ಕಾಸರಗೋಡು, ಜೂ.08 (DaijiworldNews/HR): ಕೇರಳದಲ್ಲಿ ಜೂನ್ 10 ರಿಂದ ಟ್ರಾಲಿಂಗ್ ನಿಷೇಧ ಜಾರಿಗೆ ಬರಲಿದ್ದು, ಜುಲೈ 31ರ ರಾತ್ರಿ 12 ಗಂಟೆ ತನಕ 52 ದಿನಗಳ ಕಾಲ ನಿಷೇಧ ಜಾರಿಯಲ್ಲಿರಲಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಈ ಅವಧಿಯಲ್ಲಿ ಯಾಂತ್ರೀಕೃತ ಬೋಟುಗಳಿಗೆ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೊರ ರಾಜ್ಯಗಳಿಂದ ಆಗಮಿಸಿ ಮೀನುಗಾರಿಕೆ ನಡೆಸುತ್ತಿರುವ ಬೋಟ್ಗಳು ಬುಧವಾರ ರಾತ್ರಿ 12 ಗಂಟೆಯೊಳಗೆ ಕೇರಳ ಕರಾವಳಿ ಬಿಟ್ಟು ತೆರಳಬೇಕು ಎಂದು ಮೀನುಗಾರಿಕಾ ಇಲಾಖಾ ಉಪನಿರ್ದೇಶಕರು ತಿಳಿಸಿದ್ದಾರೆ.