ಜಮ್ಮು, ಜೂ.08 (DaijiworldNews/HR): ಮಂಗಳವಾರ ಸಂಜೆ ಜಮ್ಮುವಿನ ಕತ್ರಾದ ಮಾತಾ ವೈಷ್ಣೋದೇವಿ ಮಂದಿರದ ಬಳಿಯ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಆಗಮಿಸಿವೆ.
ವೈಷ್ಣೋದೇವಿ ಮಂದಿರದ ಬಳಿಯ ಕಟ್ಟಡದೊಳಗೆ ಬೆಂಕಿ ತೀವ್ರ ಮಟ್ಟದಲ್ಲಿ ಉರಿಯುತ್ತಿದ್ದು, ಸ್ಥಳಕ್ಕಾಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ಇಲ್ಲಿಯವರೆಗೆ ಯಾವುದೇ ಜೀವ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.
ಮಾತಾ ವೈಷ್ಣೂದೇವಿ ಮಂಡಳಿಯ ನಗದು ಕೌಂಟರ್ ಬಳಿ ಈ ಬೆಂಕಿ ಪ್ರಾರಂಭವಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳೀಯ ಆಡಳಿತವು ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.