ನವದೆಹಲಿ, ಜೂ.08 (DaijiworldNews/HR): ಭಾರತದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಸಾಮಾಜಿಕ ಜಾಲತಾಣವೂ ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ಸಮಯಾವಕಾಶ ಕೋರಿದೆ ಎಂದು ತಿಳಿದುಬಂದಿದೆ.
ಹೊಸ ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಿ ಟ್ವಿಟ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದೆ ಎಂದು ವರದಿಯಾಗಿದೆ.
"ಭಾರತದ ನಿಯಮಗಳಿಗೆ ಟ್ವಿಟರ್ ಬದ್ಧವಾಗಿದ್ದು, ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾವು ಭಾರತ ಸರ್ಕಾರಕ್ಕೆ ಭರವಸೆ ನೀಡಿದ್ದೇವೆ. ನಮ್ಮ ಪ್ರಗತಿಯ ಬಗ್ಗೆ ಒಂದು ಅವಲೋಕನವನ್ನು ಶೀಘ್ರವೇ ಹಂಚಿಕೊಳ್ಳುತ್ತೇವೆ ಎಂದು ಟ್ವೀಟರ್ ವಕ್ತಾರರು ತಿಳಿಸಿದ್ದಾರೆ.
ತನ್ನ ಸೂಚನೆಯಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿಯಮಗಳನ್ನು ಅನುಸರಿಸಲು ಟ್ವಿಟ್ಟರ್ ನಿರಾಕರಿಸಿ ಮೈಕ್ರೋ ಬ್ಲಾಗಿಂಗ್ ಸೈಟ್ನ "ಬದ್ಧತೆ ಮತ್ತು ಭಾರತದ ಜನರಿಗೆ ಸುರಕ್ಷಿತ ಅನುಭವವನ್ನು ತನ್ನ ವೇದಿಕೆಯಲ್ಲಿ ಒದಗಿಸುವ ಪ್ರಯತ್ನಗಳ ಕೊರತೆ" ಯನ್ನು ತೋರಿಸಿದೆ ಎಂದು ಹೇಳಿತ್ತು.
ಇನ್ನು ಮೇ ತಿಂಗಳಲ್ಲಿ ಜಾರಿಗೆ ಬಂದ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ಐಟಿ ನಿಯಮಗಳು ಫೇಸ್ಬುಕ್ ಮತ್ತು ಟ್ವಿಟರ್ಗಳು ಕೆಲವು ನಿಯಮಗಳನ್ನು ಪಾಲಿಸುವಂತೆ ಆದೇಶಿಸಿತ್ತು.