ಕೊಲ್ಕತ್ತಾ, ಜೂ.08 (DaijiworldNews/HR): ಭಾರತದಲ್ಲಿ ಉಚಿತವಾಗಿ ಲಸಿಕೆ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ವಿಳಂಬ ಮಾಡಿರುವುದರಿಂದ ಅನೇಕ ಅಮಾಯಕ ಜೀವಗಳು ಬಲಿಯಾಗಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಎಲ್ಲರಿಗೂ ಕೊರೊನಾದ ಉಚಿತ ಲಸಿಕೆ ನೀಡುವಂತೆ ಆಗ್ರಹಿಸಿ ಫೆಬ್ರವರಿ 21ರಿಂದ ಹಲವು ಬಾರಿ ಪತ್ರ ಬರೆದಿದ್ದೆ ಎಂದು ಅವರು ವಿವರಿಸಿದ್ದು, ನಾಲ್ಕು ತಿಂಗಳು ಕಳೆದು ಹಲವು ಒತ್ತಡಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ನಮ್ಮ ಆಗ್ರಹವನ್ನು ಕೇಳಿಸಿಕೊಂಡು, ನಮ್ಮ ದೀರ್ಘಕಾಲದ ಬೇಡಿಕೆಯನ್ನು ಜಾರಿಗೊಳಿಸುತ್ತಿದ್ದಾರೆ" ಎಂದರು.
ಇನ್ನು "ಆರಂಭದಿಂದಲೇ ಭಾರತದ ಜನತೆಯ ಜೀವಕ್ಕೆ ಆದ್ಯತೆ ನೀಡಬೇಕಿತ್ತು, ಆದರೆ ಪ್ರಧಾನಿಯವರ ಈ ವಿಳಂಬಿತ ನಿರ್ಧಾರ ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದಿವೆ. ಇನ್ನಾದರೂ ಲಸಿಕೆ ಅಭಿಯಾನವನ್ನು ಉತ್ತಮವಾಗಿ ನಿಭಾಯಿಸಿ, ಜನರ ಮೇಲೆ ಗಮನಹರಿಸಲಿ ಪ್ರಚಾರದ ಮೇಲಲ್ಲ" ಎಂದು ಹೇಳಿದ್ದಾರೆ.