ನವದೆಹಲಿ, ಜೂ 8 (DaijiworldNews/MS): ತಾನು ಭಾರತದ ನೆಲದ ಮೇಲೆ ಕಾಲಿಟ್ಟರೆ ಮಾತ್ರ ಕೋವಿಡ್-19 ಸಾಂಕ್ರಾಮಿಕ ಭಾರತದಿಂದ ತೊಲಗುತ್ತದೆ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿದ್ದಾನೆ.
ಒಂದಿಲ್ಲೊಂದು ಚಿತ್ರವಿಚಿತ್ರ ಹೇಳಿಕೆ ನೀಡುತ್ತಿರುವ, ಭಾರತದಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ತನ್ನ ಹೊಸ ವೀಡಿಯೊದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಆತ ಬಿಡುಗಡೆ ಮಾಡಿರುವ ಹೊಸ ವೀಡಿಯೊದಲ್ಲಿ, ನಿತ್ಯಾನಂದನ ಶಿಷ್ಯರೊಬ್ಬರು ಕೊರೊನಾ ಸಾಂಕ್ರಮಿಕ ಭಾರತದಿಂದ ಯಾವಾಗ ತೊರೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ . ಇದಕ್ಕೆ ಉತ್ತರಿಸುವಾಗ ನಿತ್ಯಾನಂದನು,'ಅಮ್ಮನ್' ದೇವಿಯು ತನ್ನ ಆಧ್ಯಾತ್ಮಿಕ ದೇಹವನ್ನು ಪ್ರವೇಶಿಸಿದ್ದಾಳೆ, ನಾನು ಭಾರತೀಯ ನೆಲದ ಮೇಲೆ ಕಾಲಿಟ್ಟಾಗ ಮಾತ್ರ ಕೋವಿಡ್-19 ಭಾರತವನ್ನು ತೊರೆಯುತ್ತಾಳೆ ಎಂದು ಹೇಳಿದರು. ನಿತ್ಯಾನಂದನ ಈ ಉದ್ದೇಶಿತ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ, ದೇವಮಾನವ ಭಾರತದಿಂದ ಕೋವಿಡ್-19 ಅನ್ನು ನಾಶಮಾಡಲು ಬರುತ್ತಾನೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದು ಈಕ್ವೆಡಾರ್ ಕರಾವಳಿಯಲ್ಲಿ ಅಡಗಿದ್ದಾನೆಂದು ಹೇಳಲಾಗುತ್ತಿದೆ. ಇಲ್ಲಿ 'ಕೈಲಾಸ' ಎಂಬ ಹೊಸ ದೇಶ ಸ್ಥಾಪಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.