ಬೆಂಗಳೂರು, ಜೂ. 07(DaijiworldNews/SM): ಕೆಲವು ತಿಂಗಳ ಹಿಂದೆ ನೌಕರರ ಮುಷ್ಕರದ ಬಿಸಿ ಎದುರಿಸಿದ್ದ ಕರ್ನಾಟಕ ಸರಕಾದ ರಸ್ತೆ ಸಾರಿಗೆ ನಿಗಮ ಇದೀಗ ಕೊರೋನಾ ಕಾರಣದಿಂದ ಉಂಟಾಗಿರುವ ಲಾಕ್ ಡೌನ್ ನಿಂದಾಗಿ ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ.
ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಸಾರಿಗೆ ನಿಗಮಗಳಿಗೆ ಒಟ್ಟು 560 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ. ಇದರಿಂದಾಗಿ ಸಂಬಳ ನೀಡಲು ಪರದಾಡುವ ಪರಿಸ್ಥಿತಿ ತಲೆದೋರಿದೆ.
ಕೋರೋನಾ ಹಿನ್ನಲೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬಸ್ಗಳು ರಸ್ತೆಗಿಳಿದಿಲ್ಲ. ಇದರ ಮೊದಲು ನೌಕರರು ಮುಷ್ಕರ ನಡೆಸಿದ ಪರಿಣಾಮದಿಂದಾಗಿ ನಿಗಮಕ್ಕೆ ಕೋಟ್ಯಾಂತರ ನಷ್ಟ ಉಂಟಾಗಿತ್ತು. ಇದೀಗ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಪ್ರಸ್ತುತ ಬಿಎಂಟಿಸಿಯ ದಿನದ ಆದಾಯ 2.5 ರಿಂದ 3 ಕೋಟಿ ಇದೆ. ಆದರೆ, ಲಾಕ್ ಡೌನ್ ನಿಂದಾಗಿ 120 ಕೋಟಿ ರೂ. ನಷ್ಟ ಉಂಟಾಗಿದೆ. ಕೆಎಸ್ಆರ್ಟಿಸಿ ನಿತ್ಯದ ಆದಾಯ 7 ಕೋಟಿ ರೂ. ಇದ್ದು, ಇಲ್ಲಿಯ ತನಕ 280 ಕೋಟಿ ರೂ. ನಷ್ಟ ಉಂಟಾಗಿದೆ.