ಲಕ್ನೋ, ಜೂ.07 (DaijiworldNews/HR): 22 ವರ್ಷದ ಯುವತಿಯೊಬ್ಬಳು ಹಸೆಮಣೆ ಏರಲು ಸಿದ್ಧವಾಗಿದ್ದು, ಆಕೆಯನ್ನ ವರಿಸುವ ವರ ಮತ್ತು ಅವನ ಸ್ನೇಹಿತರು ಕುಡಿದು ಬಂದಿದ್ದು, ಇದರಿಂದ ಕೋಪಗೊಂಡ ವಧು ತನ್ನ ಮದುವೆಯನ್ನ ರದ್ದುಗೊಳಿಸಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಯುವತಿಯು ಮದುವೆಯನ್ನು ನಿಲ್ಲಿಸುತ್ತಿದ್ದಂತೆ, ಅವಳ ಕುಟುಂಬವು ವರ ಒತ್ತೆಯಾಳುಗಳಾಗಿ ಇರಿಸಿಕೊಂಡು, ಮದುವೆ ನಿಗದಿಪಡಿಸಿದಾಗ ಅವರಿಗೆ ನೀಡಲಾದ ಉಡುಗೊರೆಗಳನ್ನ ಹಿಂದಿರುಗಿಸುವಂತೆ ಕೇಳಿದೆ ಎನ್ನಲಾಗಿದೆ.
ಆದರೆ ವರನ ಕುಟುಂಬ ಪೊಲೀಸರನ್ನ ಕರೆದು, ಮಧ್ಯಸ್ಥಿಕೆ ವಹಿಸಲು ವಿನಂತಿಸಿದ್ದರು ಕೂಡ ಯುವತಿ ಮಾತ್ರ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾಳೆ.
ಟಿಕ್ರಿ ಗ್ರಾಮದ ರೈತ ರವೀಂದ್ರ ಪಟೇಲ್ ತನ್ನ ಮಗಳ ಮದುವೆ ಸಮಾರಂಭವನ್ನ ನೇರವೇರಿಸಲು ಸಿದ್ಧತೆ ನಡೆಸಿದ್ದರು. ಆದರೆ ಮದುವೆಯ ದಿನ, ವರ ಮತ್ತು ಆತನ ಕೆಲವು ಸ್ನೇಹಿತರು ಕುಡಿದ ಸ್ಥಿತಿಯಲ್ಲಿ ಮಂಟಪಕ್ಕೆ ಬಂದಿದ್ದಾರೆ. ಅಲ್ಲದೇ ವರನು ವಧುವನ್ನ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಇನ್ನು ವಧು ನೃತ್ಯ ಮಾಡಲು ನಿರಾಕರಿಸಿದಕ್ಕೆ ವರ ಮೂತ್ರ ವಿಸರ್ಜನೆ ಮಾಡಿ ರಂಪಾಟ ಮಾಡಿದ್ದಾನೆ. ಅವನ ವರ್ತನೆಯಿಂದ ಕೋಪಗೊಂಡ ವಧು ಮದುವೆಯನ್ನ ರದ್ದುಗೊಳಿಸಿದ್ದಾಳೆ.