ನವದೆಹಲಿ, ಜೂ.07 (DaijiworldNews/HR): ಕೊರೊನಾದ 3ನೇ ಅಲೆಯೂ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂಬುದಾಗಿ ಹೇಳಲಾಗುತ್ತಿತ್ತು, ಈ ಸಂಬಂಧ 2 ರಿಂದ 18 ವರ್ಷದ ಒಳಗಿನವರಿಗೆ ಲಸಿಕೆ ಪ್ರಯೋಗ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯದಲ್ಲಿ ಇಂದು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವಂತ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ನೀಡಿ, ತಪಾಸಣೆ ಮಾಡುವಂತ ಕಾರ್ಯ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 525 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ಈ ಪ್ರಯೋಗ ನಡೆಯುತ್ತಿದ್ದು, 28 ದಿನಗಳ ನಂತ್ರ 2ನೇ ಡೋಸ್ ಅನ್ನು ಇಂಟ್ರಾಮಸ್ಕುಲರ್ ( ಸ್ನಾಯುವಿನಾಳಕ್ಕೆ) ಮೂಲಕ ನೀಡಲಾಗುತ್ತದೆ.
ಇನ್ನು ಸೋಮವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಾರ್ಥ ನಡೆಯುತ್ತಿದ್ದು, ಪರೀಕ್ಷೆಯು ಯಶಸ್ವಿಯಾದಲ್ಲೀ, ಮಕ್ಕಳಿಗೂ ಲಸಿಕೆ ಸದ್ಯದಲ್ಲೇ ಸಿಗಲಿದೆ.