ನವದೆಹಲಿ, ಜೂ 07 (DaijiworldNews/MS): ದೇಶಾದ್ಯಂತ ಕೋವಿಡ್ ಸೋಂಕಿನ ಇಳಿಮುಖ ಹಾದಿಯಲ್ಲಿ ಸಾಗುತ್ತಿರುವಾಗ , ಪ್ರಧಾನಿ ನರೇಂದ್ರ ಮೋದಿಯವರು, ಇಂದು ಜೂ. 7ರ ಸೋಮವಾರ ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿಯವರ ದೇಶವನ್ನು ಉದ್ದೇಶಿಸಿ ಮಾಡಲಿರುವ ಭಾಷಣ ತೀವ್ರ ಕುತೂಹಲ ಕೆರಳಿಸಿದ್ದು, ವಾಕ್ಸಿನೇಷನ್ ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತಂತೆ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ.
ಇಂದಿನ ದೇಶವನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡುತ್ತಿರುವಂತ ಭಾಷಣದಲ್ಲಿ, ದೇಶದ ಪ್ರಸ್ತುತ ಕೋವಿಡ್ ಸ್ಥಿತಿಗತಿ, ಬ್ಲಾಕ್ ಫಂಗಸ್ ವ್ಯಾಪಿಸುವಿಕೆ ತಡೆ ನಿಟ್ಟಿನಲ್ಲಿ ಹೊಸ ಘೋಷಣೆ, ಕೆಲವು ವಗ೯ಗಳಿಗೆ ಆಥಿ೯ಕ ಪ್ಯಾಕೇಜ್ ಘೋಷಣೆಯ ನಿರೀಕ್ಷೆಯೂ ಮಾಡಲಾಗಿದೆ. ಇದಲ್ಲದೆ ವಾಕ್ಸಿನೇಷನ್ ನೀತಿ ಹಾಗೂ ನಿಯಂತ್ರಣ ಕ್ರಮಗಳ ಕುರಿತಂತೆ, ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಅನುಸರಿಸಬೇಕಾದಂತ ನಿಯಮಗಳ ಕುರಿತಂತೆ ಮಾತನಾಡಬಹುದು ಎಂದು ಅಂದಾಜಿಸಲಾಗಿದೆ.