ನವದೆಹಲಿ, ಜೂ.07 (DaijiworldNews/HR): "ಅನೇಕ ರಾಜ್ಯಗಳು ಅನ್ಲಾಕ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಸಂಚಾರ ಆರಂಭಿಸಿದ ಜನರಿಗೆ ಪೆಟ್ರೋಲ್ ಬಂಕ್ಗಳಲ್ಲಿ ಹಣ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡಿರುವ ಅನಾಹುತ ಅರ್ಥವಾಗಲಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾಗಿಂತಲೂ ಹೆಚ್ಚಾಗಿ ಸರ್ಕಾರದ ತೆರಿಗೆ ಹೊರೆಯು ಜನರನ್ನು ಕಾಡಲಿದ್ದು, ತೆರಿಗೆ ಸಂಗ್ರಹ ಸಾಂಕ್ರಾಮಿಕದ ಅಲೆಗಳು ನಿರಂತರವಾಗಿ ಎದುರಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಿದ್ದರೂ, ದೇಶಿಯವಾಗಿ ಪೆಟ್ರೋಲ್, ಡಿಸೇಲ್ ಬೆಲೆ ದುಬಾರಿಯಾಗಿದೆ ಎಂದಿದ್ದಾರೆ.
ಇನ್ನು ಕೊರೊನಾದಿಂದಾಗಿ ಜನರು ಬೀದಿಗಿಳಿದು ಹೋರಾಡುವ ಪರಿಸ್ಥಿತಿಯೂ ಇಲ್ಲ. ಅತ್ತ ದುಬಾರಿ ಬೆಲೆ ಪಾವತಿಸಿ ಪೆಟ್ರೋಲ್, ಡಿಸೇಲ್ ಖರೀದಿಸಲು ಆಗದೆ ಜನರು ಪರದಾಡುತ್ತಿದ್ದು, ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.