ಬೆಂಗಳೂರು, ಜೂ.07 (DaijiworldNews/HR): ಭಾರತದಲ್ಲಿ ಲಸಿಕೆ ನೀಡಲು ಪ್ರಾರಂಭಿಸಿದಾಗ ಲಸಿಕೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾತನಾಡಿ, ಇಂದು ಲಸಿಕೆಗೋಸ್ಕರ ಭಿಕ್ಷೆ ಬೇಡ್ತಿವಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಶಾಸಕ ರಾಮದಾಸ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಡಿ.ಕೆ ಶಿವಕುಮಾರ್ ಅವರೇ ಒಂದು ಲಸಿಕೆ ಬರುತ್ತದೆ ಎಂದರೆ ಅದನ್ನು ಅನೇಕ ಬಾರಿ ಪರೀಕ್ಷೆ ಮಾಡಿರುತ್ತಾರೆ, ಆ ಪರೀಕ್ಷೆಗಳಲ್ಲಿ ಯಶಸ್ವಿಯಾದಾಗ ಮಾತ್ರ ಮಾನವ ಪ್ರಯೋಗ ಮಾಡುತ್ತಾರೆ, ಹಾಗಾಗಿ ಮೊದಲಿಗೆ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಿದ್ದೇವೆ" ಎಂದರು.
ಇನ್ನು "ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡಿದಕ್ಕಾಗಿಯೇ ಇಂದು ಅವರು ಕೊರೊನಾ ಸೋಂಕಿಗೆ ತುತ್ತಾಗದೆ ಲಕ್ಷಾಂತರ ರೋಗಿಗಳ ಸೇವೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.