ಚಾಮರಾಜನಗರ, ಜೂ. 06(DaijiworldNews/SM): ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತೆಯನ್ನು ಸರಕಾರ ವರ್ಗಾವಣೆ ಮಾಡಿದೆ. ಇದೀಗ ಚಾಮರಾಜ ನಗರದಲ್ಲಿ ಉಂಟಾದ ಆಕ್ಸಿಜನ್ ಕೊರತೆ ದುರಂತಕ್ಕೆ ಸಂಬಂಧಿಸಿ ರೋಹಿಣಿ ಸಿಂಧೂರಿಯವರ ವಿರುದ್ಧ ಮತ್ತೆ ಆರೋಪ ಕೇಳಿ ಬಂದಿದೆ.
ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿ ಮತ್ತೆ ಸಿಂಧೂರಿಯವರನ್ನು ಹೊಣೆ ಮಾಡಲಾಗುತ್ತಿದೆ. ಬಿಜೆಪಿ ನಾಯಕ ಅಮ್ಮನಪುರ ಮಲ್ಲೇಶ್ ಸಿಂಧೂರಿ ವಿರುದ್ಧ ಆರೋಪಿಸಿದ್ದು, ಇದಕ್ಕೆ ತಕ್ಕ ಪುರಾವೆಗಳು ಕೂಡ ಇವೆ ಎಂದಿದ್ದಾರೆ. ಅಲ್ಲದೆ, ಸಿಂಧೂರಿಯವರನ್ನು ಗುದ್ದೆಯಿಂದ ಅಮಾನತು ಮಾಡಬೇಕು. ಅವರ ವಿರುದ್ಧ ಮೊಕದ್ದಮೆ ಹೂಡಬೇಕೆಂದು ಅವರು ಆರೋಪಿಸಿದ್ದಾರೆ.
ಮೇ ತಿಂಗಳ 3ರಂದು ರಾತ್ರಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಇದರಿಂದಾಗಿ ಸುಮಾರು 24ಕ್ಕೂ ಹೆಚ್ಚು ರೋಗಿಗಳು ಪ್ರಾಣಬಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆಯೂ ಕೂಡ ರೋಹಿಣಿ ವಿರುದ್ಧ ಆರೋಪ ವ್ಯಕ್ತವಾಗಿತ್ತು. ಇದೀಗ ಮತ್ತೆ ಸಿಂಧೂರಿ ವಿರುದ್ಧ ಆರೋಪ ವ್ಯಕ್ತವಾಗಿದೆ.