ಮಂಗಳೂರು, ಜೂ. 06(DaijiworldNews/SM): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ. ಈ ಬಗ್ಗೆ ಬಿಜೆಪಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷೆ ನಿಷ್ಠೆಯುಳ್ಳವರು. ಅವರು ಇತರ ಕಾರ್ಯಕರ್ತರಿಗೆ ಆದರ್ಶರಾಗಿದ್ದಾರೆ. ಪಕ್ಷ, ಹೈಕಮಾಂಡ್ ಗೆ ಬದ್ದರಾಗಿರುವ ಅವರು, ಕಾರ್ಯಕರ್ತರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದಿದ್ದಾರೆ.
ಇನ್ನು ಸಿಎಂ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಅಲ್ಲದೆ, ಹೈಕಮಾಂಡ್ ಕೂಡ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಾಗ್ಯೂ ಸಿಎಂ ಈ ಹೇಳಿಕೆ ನೀಡಿರುವುದು ಅವರಲ್ಲಿರುವ ಪಕ್ಷ ನಿಷ್ಠೆ ತೋರಿಸಿದೆ. ಪ್ರಸ್ತುತ ವಕ್ಕರಿಸಿರುವ ಕೊರೋನಾ ಸೋಂಕಿನ ವಿರುದ್ಧ ಹೋರಾಡುವುದು ಅನಿವಾರ್ಯತೆ ಇದ್ದು, ಇದಕ್ಕೆ ಶ್ರಮ ವಹಿಸಲಾಗುವುದು. ಹೊರತಾಗಿ ನಾಯಕತ್ವದ ಬದಲಾವಣೆಯ ಪ್ರಶ್ನೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಸ್ಪಷ್ಟಪಡಿಸಿದ್ದಾರೆ.