ಜಮ್ಮು ಕಾಶ್ಮೀರ, ಜೂ.5(DaijiworldNews/HR): ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿರುವ ತನ್ನ ಮನೆಯ ತನ್ನ ಮನೆಯ ಹುಲ್ಲುಹಾಸಿನ ಮೇಲೆ ಆಟವಾಡುತ್ತಿದ್ದಾಗ ನಾಲ್ಕು ವರ್ಷದ ಬಾಲಕಿ ನಾಪತ್ತೆಯಾಗಿದ್ದು, ಬಳಿಕ ಹೆತ್ತವರು ಹುಡುಕಿದರು ಪತ್ತೆಯಾಗದಿದ್ದಾಗ ನೆರೆಹೊರೆಯವರನ್ನು ಹಾಗೂ ಪೊಲೀಸರನ್ನು ಸಂಪರ್ಕಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸರಿಸುಮಾರು ಒಂದು ಗಂಟೆಯ ನಂತರ, ಕಾಡಿನಲ್ಲಿ ಬಾಲಕಿಯ ಚಪ್ಪಲಿ ಕಂಡುಬಂದಿದ್ದು, ಆಕೆಯನ್ನು ಚಿರತೆ ಕರೆದೊಯ್ಯುದಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಚಿರತೆಯು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ" ಎಂದು ನೆರೆಹೊರೆಯವರು ಹೇಳಿದರು.
ಶುಕ್ರವಾರದ ಮುಂಜಾನೆ, ಆಕೆಯ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಅರಣ್ಯದಲ್ಲಿ ಬಾಲಕಿಯ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಶೋಧ ತಂಡದ ಭಾಗವಾಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಡ್ಗಾಮ್ ಜಿಲ್ಲಾಧಿಕಾರಿ ಶಬಾಜ್ ಮಿರ್ಜಾ ಅವರು ಪೊಲೀಸ್ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಇನ್ನು ಮುಂದೆ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು, ಹಿಮ ಮತ್ತು ಪೊದೆಗಳಿಂದ ಬಿದ್ದ ವಸ್ತು ಮರಗಳನ್ನು ತಕ್ಷಣ ತೆಗೆಯಬೇಕು ಎಂದು ಸೂಚಿಸಿದ್ದಾರೆ.
ಕಾಡು ಪ್ರಾಣಿಗಳನ್ನು (ಚಿರತೆ) ನಿರ್ಮೂಲನೆ ಮಾಡಲು ಯಂತ್ರೋಪಕರಣಗಳನ್ನು ಹೊಂದಿದ ಸಿಬ್ಬಂದಿಯನ್ನು ವೈಲ್ಡ್ ಲೈಫ್ ವಾರ್ಡನ್ ನಿಯೋಜಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದು, ಮೃತ ಹುಡುಗಿಯ ಕುಟುಂಬಕ್ಕೂ ಪರಿಹಾರ ನೀಡಲಾಗುವುದು.
ಇನ್ನು ಡಿಸಿ ಶಬಾಜ್ ಮಿರ್ಜಾ ಮತ್ತು ಎಸ್ಎಸ್ಪಿ ತಾಹಿರ್ ಸಲೀಮ್ ಅವರು ಮಧ್ಯಾಹ್ನ ಮನೆಗೆ ಭೇಟಿ ನೀಡಿ ಈ ರೀತಿಯ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ಭರವಸೆ ನೀಡಿ ಕುಟುಂಬದೊಂದಿಗೆ ಸಂತಾಪ ವ್ಯಕ್ತಪಡಿಸಿದರು.