ಬೆಂಗಳೂರು, ಜೂ 05 (DaijiworldNews/MS):ಗೂಗಲ್ ಕನ್ನಡಿಗರ ಕ್ಷಮೆ ಯಾಚಿಸಿದ ಬೆನ್ನಲ್ಲೇ ಇದೀಗ ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಆನ್ಲೈನ್ ಶಾಪಿಂಗ್ ಸಂಸ್ಥೆಯೂ ಕನ್ನಡಿಗರ ಸಂಸ್ಕೃತಿ ನಾಡು ನುಡಿಗೆ ಅವಮಾನ ಮಾಡಿದೆ.
ಮಹಿಳೆಯರ ಒಳಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನದ ಮುದ್ರಿಸಿ ಮಾರಾಟಕ್ಕೆ ಇಟ್ಟ ಅಮೆಜಾನ್ ವಿರುದ್ದ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಅಮೆಜಾನ್ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ, ಲಾಂಛನಕ್ಕೆ ಹೀಗೆ ಅವಮಾನ ಆಗಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ, ವಿರೋಧ ವ್ಯಕ್ತಪಡಿಸಿದ್ದಾರೆ.
ಅಮೇಜಾನ್ ಕಂಪನಿ ಮಹಿಳೆಯರ ಒಳ ಉಡುಪಿನಲ್ಲಿ ನಮ್ಮ ಕನ್ನಡದ ಬಾವುಟ, ಭಾರತದ ಅಶೋಕ ಚಕ್ರ, ಕರ್ನಾಟಕದ ಲಾಂಛನವನ್ನ ಹಾಕುವ ಮೂಲಕ ಕನ್ನಡಿಗರಿಗೆ ಹಾಗೂ ಭಾರತೀಯರಿಗೆ ನೋವುಂಟು ಮಾಡಿದೆ. ಇಂತಹ ದುಷ್ಟ ಶಕ್ತಿಗಳ ಹುನ್ನಾರಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.