ಬೆಂಗಳೂರು, ಜೂ.5(DaijiworldNews/HR): 50 ರಿಂದ 99 ಹಾಸಿಗೆಗಳ ನಡುವಿನ ಸಾಮರ್ಥ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಂಗಳು ತಮ್ಮದೇ ಆದ ಆಮ್ಲಜನಕ ಸ್ಥಾವರ (ಪಿಎಸ್ಎ) ಅಥವಾ ಆಮ್ಲಜನಕ ರೀಫಿಲ್ಲಿಂಗ್ ಪ್ಲಾಂಟ್ಗಳನ್ನು ಸ್ಥಾಪಿಸಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ನೀಡಿದ್ದಾರೆ.
ಸಾಂಧರ್ಭಿಕ ಚಿತ್ರ
100 ಅಥವಾ ಅಧಿಕ ಸಾಮರ್ಥ್ಯದ ಹಾಸಿಗೆ ಹೊಂದಿರುವ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಂಗಳು ತಮ್ಮದೇ ಆದ ಆಮ್ಲಜನಕ ಸ್ಥಾವರ ಅಥವಾ ಆಮ್ಲಜನಕ ರೀಫಿಲ್ಲಿಂಗ್ ಪ್ಲಾಂಟ್ಗಳನ್ನು ಸ್ಥಾಪಿಸಬೇಕು ಅಥವಾ ಆಮ್ಲಜನಕದ ಸಾಮಾನ್ಯ ಅಗತ್ಯಕ್ಕಿಂತ ಕನಿಷ್ಠ ಎರಡು ಪಟ್ಟು ಅಗತ್ಯತೆಯನ್ನು ಪೂರೈಸುವ ಅಗತ್ಯ ಮೂಲಸೌಕರ್ಯಗಳನ್ನು ರಚಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಭವಿಷ್ಯದಲ್ಲಿ ಆಮ್ಲಜನಕ ಬಿಕ್ಕಟ್ಟನ್ನು ತಪ್ಪಿಸಲು, ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಯ ಆವರಣದಲ್ಲಿ 4 ತಿಂಗಳ ಕಾಲಾವಧಿಯಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.