ಮುಂಬೈ, ಜೂ 05 (DaijiworldNews/MS): ಎರಡು ವರ್ಷಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಾಗಿಣಿ - 3 ಖ್ಯಾತಿಯ ಕಿರುತೆರೆ ನಟ ಪರ್ಲ್ ವಿ ಪುರಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಪುರಿ ವಿರುದ್ಧ 2019 ರಲ್ಲಿ ಸಂತ್ರಸ್ತೆಯ ತಂದೆ ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಮಲಾಡ್ ನಲ್ಲಿರುವ ಮಲ್ವಾನಿ ಪೊಲೀಸರ ಪ್ರಕಾರ "ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ 2019 ರಲ್ಲಿ ಅವರನ್ನು ಸಂಪರ್ಕಿಸಿದ್ದರು. ತನಿಖೆ ಪ್ರಾರಂಭವಾದ ಸಮಯದಲ್ಲಿ ಆರೋಪಿಗಳ ಗುರುತು ಬಹಿರಂಗಗೊಂಡಿರಲಿಲ್ಲ. ಪರ್ಲ್ ವಿ. ಪುರಿ ಹಾಗೂ ಇತರ ಆರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಲಿವ್ ಪೊಲೀಸರ ಪ್ರಕಾರ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ 2019 ರಲ್ಲಿ ಅವರನ್ನು ಸಂಪರ್ಕಿಸಿದ್ದರು. ತನಿಖೆ ಪ್ರಾರಂಭವಾದ ಸಮಯದಲ್ಲಿ ಆರೋಪಿಗಳ ಗುರುತು ಬಹಿರಂಗಗೊಂಡಿರಲಿಲ್ಲ. ಸಂತ್ರಸ್ತೆ ಇತ್ತೀಚೆಗೆ ಆರೋಪಿಯನ್ನು ಗುರುತಿಸಿದ್ದು ಆಕೆ ಹೇಳಿಕೆಯನ್ನ್ ಆಧಾರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಗುರುತಿಸಿದ ನಂತರ, ಹೆಚ್ಚಿನ ತನಿಖೆಗಾಗಿ ನಾವು ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ”ಎಂದು ಹೇಳಿದ್ದಾರೆ
ಪರ್ಲ್ ವಿ. ಪುರಿ 2013 ರಲ್ಲಿ 'ದಿಲ್ ಕಿ ನಝರ್ ಸೆ ಖೂಬ್ಸುರತ್' ಧಾರಾವಾಹಿಯಲ್ಲಿ ಪೋಷಕ ನಟನಾಗಿ ನಟನಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಫಿರ್ ಭಿ ನಾ ಮಾನೆ ,ಬಡ್ಡಮೀಝ್ ದಿಲ್ ಮೂಲಕ ಖ್ಯಾತಿ ಗಳಿಸಿದ್ದ. ನಂತರ ನಾಗಿನ್ 3, ನಾಗಾರ್ಜುನ ಏಕ್ ಯೋಧಾ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದ. ಟಿವಿಯಲ್ಲಿ ಇತ್ತೀಚಿನ ಬ್ರಹ್ಮರಾಕ್ಷಸ್ 2, ಧಾರವಾಹಿಯಲ್ಲಿ ಆತ ಅಂಗದ್ ಮೆಹ್ರಾ ಪಾತ್ರವನ್ನು ನಿರ್ವಹಿಸಿದ್ದ.