ಕೋಲ್ಕ್ಕತ್ತಾ, ಜೂ 05 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಾಗುತ್ತಿದ್ದಂತೆ, ಅಲ್ಲಿನ ಆರೋಗ್ಯ ಇಲಾಖೆ ನೀಡಿರುವ ಕೊವೀಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಛಾಯಚಿತ್ರ ಮುದ್ರಣಗೊಳ್ಳುತ್ತಿದೆ.
ಇದರ ಭೆನ್ನಲ್ಲೇ ಟಿಎಂಸಿ ಸರ್ಕಾರದ ನಿರ್ಧಾರವನ್ನ ಬಿಜೆಪಿ ಕಟುವಾಗಿ ಟೀಕಿಸಿದೆ. ಕೊರೊನಾ ಲಸಿಕೆಯ ಮೂರನೇ ಹಂತದಲ್ಲಿ 18-44 ವರ್ಷದೊಳಗಿನ ಜನತೆ ಬಂಗಾಳ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ದೀದಿ ಪೋಟೋ ಮುದ್ರಿತವಾಗಿರುವ ಪ್ರಮಾಣಪತ್ರವು ಬಂಗಾಳಿ ಮತ್ತು ಇಂಗ್ಲಿಷ್ ಎರಡರಲ್ಲೂ “ಎಚ್ಚರಿಕೆ, ಸುರಕ್ಷಿತವಾಗಿರಿ” ಎಂಬ ಘೋಷಣೆಯನ್ನು ಹೊಂದಿದೆ. ಇಲ್ಲಿಯವರೆಗೆ ನೀಡಲಾದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಛಾಯಚಿತ್ರವಿತ್ತು ಇದನ್ನು ಹಿಂದೆ ತೃಣಮೂಲ ಕಾಂಗ್ರೆಸ್ ಟೀಕಿಸಿತ್ತು.
ಇದೀಗ ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಟಿಎಂಸಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರೇ ಇದನ್ನ ಮೊದಲು ಆರಂಭಿಸಿದ್ದು, ಅವರನ್ನ ನಾವು ಫಾಲೋ ಮಾಡಿದ್ದೇವೆ. ಬಿಜೆಪಿ ಫೋಟೋ ಹಾಕದಿದ್ರೆ ನಾವು ಹಾಕಲ್ಲ ಎಂದು ಟಿಎಂಸಿಯ ಸೌಗತ್ ರಾಯ್ ಹೇಳಿದ್ದಾರೆ.
ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಮ್ಮ ಪ್ರಧಾನಿ ಹೊಂದಿರುವ ಸ್ಥಾನವನ್ನು ಮುಖ್ಯಮಂತ್ರಿಯಿಂದ ಬದಲಾಯಿಸಬಹುದೆಂದು ತೃಣಮೂಲ ಕಾಂಗ್ರೆಸ್ ಯೋಜಿಸಲು ಬಯಸಿದೆ ಪಶ್ಚಿಮ ಬಂಗಾಳ ಭಾರತದಲ್ಲಿ ಒಂದು ರಾಜ್ಯ ಅನ್ನೋದನ್ನ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸಮಿಕ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.