ಬೆಂಗಳೂರು, ಜೂ.04 (DaijiworldNews/HR): ಜೂನ್ 15ರಂದು 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸರ್ಕಾರ ಈ ಹಿಂದೆ ದಿನಾಂಕ ನಿಗದಿಪಡಿಸಿದ್ದು, ಆದರೆ ರಾಜ್ಯ ಸರ್ಕಾರ ಕೊರೊನಾ ನಿರ್ಬಂಧಗಳನ್ನು ಜೂ.14ರವರೆಗೆ ಮುಂದುವರಿಸಿದ ಕಾರಣ ಇದೀಗ ಶೈಕ್ಷಣಿಕ ವರ್ಷಾರಂಭದ ದಿನಾಂಕ ಬದಲಾವಣೆ ಮಾಡಿ ಜುಲೈ 1ರಿಂದ ಶಾಲಾ ಚಟುವಟಿಕೆ ಆರಂಭಿಸಲು ಮರು ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಸರ್ಕಾರದ ಸುತ್ತೋಲೆಯ ಪ್ರಕಾರ, "ಜುಲೈ 1ರಿಂದ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ವರ್ಷಾರಂಭವಾಗಲಿದೆ". ಎಂದು ತಿಳಿಸಿದೆ.
ಇನ್ನು ಜುಲೈ1ರಿಂದ ಅಕ್ಟೋಬರ್ 10ರವರೆಗೆ ಮೊದಲ ಅವಧಿ ತರಗತಿಗಳು ಮತ್ತು ಅಕ್ಟೋಬರ್ 21ರಿಂದ ಮಂದಿನ ವರ್ಷದ ಎಪ್ರಿಲ್ 30ರವರೆಗೆ ಎರಡನೇ ಹಂತದ ತರಗತಿಗಳ ನಡೆಯಲಿದೆ.
ಅಕ್ಟೋಬರ್ 10ರಿಂದ 20ರ ವರೆಗೆ ದಸರಾ ರಜೆ ಘೋಷಿಸಲಾಗಿದ್ದು, 2022ರ ಮೇ 1ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗಧಿಪಡಿಸಿ ಸುತ್ತೋಲೆ ಹೊರಡಿಸಿದೆ.