ನವದೆಹಲಿ, ಜೂ.04 (DaijiworldNews/HR): ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಸಿದ್ಧಾರ್ಥ್ ಪಿಥಾನಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ನಿಸಾವಿನ ಬಳಿಕ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಪ್ರಾರಂಭಿಸಿದ ಡ್ರಗ್ಸ್ ತನಿಖೆಗೆ ಸಂಬಂಧಿಸಿದಂತೆ ಇಂದು ಸಿದ್ಧಾರ್ಥ್ ಪಿಥಾನಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇನ್ನು ಮೇ 24ರಂದು ಎನ್ಸಿಬಿ ಹೈದರಾಬಾದ್ʼನಿಂದ ಸಿದ್ಧಾರ್ಥ್ ಪಿಥಾನಿಯನ್ನ ಬಂಧಿಸಿತ್ತು ಮತ್ತು ತೆಲಂಗಾಣ ರಾಜಧಾನಿಯ ನ್ಯಾಯಾಲಯದಿಂದ ಪಡೆದ ಟ್ರಾನ್ಸಿಟ್ ವಾರಂಟ್ ಮೇಲೆ ಅವರನ್ನು ಮುಂಬೈಗೆ ಕರೆತರಲಾಯಿತು.
ಸಿದ್ಧಾರ್ಥ್ ಪಿಥಾನಿ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತರಾಗಿದ್ದರು ಮತ್ತು ಅವರೊಂದಿಗೆ ಉಪನಗರ ಮುಂಬೈನ ಬಾಂದ್ರಾ ನಿವಾಸದಲ್ಲಿ ತಂಗಿದ್ದರು ಎಂದು ವರದಿಯಾಗಿದೆ.