ನವದೆಹಲಿ, ಜೂ.04 (DaijiworldNews/HR): ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ವಜ್ರ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಕರೆತರಲು ಭಾರತ ಸರ್ಕಾರ ಕೆರಿಬಿಯನ್ ರಾಷ್ಟ್ರಕ್ಕೆ ಕಳುಹಿಸಿದ್ದ ಕತಾರ್ ಏರ್ವೇಸ್ನ ಖಾಸಗಿ ವಿಮಾನ ಏಳು ದಿನಗಳ ಬಳಿಕ ಭಾರತದತ್ತ ಹಿಂದಿರುಗಿದೆ ಎಂದು ತಿಳಿದು ಬಂದಿದೆ.
ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಮುಂದೂಡಿದ್ದು, ಕನಿಷ್ಠ 1 ತಿಂಗಳ ಕಾಲ ಚೋಕ್ಸಿ ಡೊಮಿನಿಕಾದಲ್ಲೇ ಉಳಿಯಬೇಕಾಗಿ ಬರಲಿದೆ.
ಇನ್ನು ಈ ಹಿನ್ನೆಲೆಯಲ್ಲಿ ಚೋಕ್ಸಿ ಕರೆತರಲು ತೆರಳಿದ್ದ ಭಾರತದ ತನಿಖಾ ಅಧಿಕಾರಿಗಳು ಇದೀಗ ದೇಶಕ್ಕೆ ಹಿಂದಿರುಗಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ವಂಚಿಸಿ ಪರಾರಿಯಾಗಿರುವ ಚೋಕ್ಸಿಯನ್ನು ಕರೆತರಲು ಸಿಬಿಐ ಡಿಐಜಿ ಶ್ರದ್ಧಾ ರಾವುತ್ ನೇತೃತ್ವದ ಅಧಿಕಾರಿಗಳ ತಂಡ ಡೊಮಿನಿಕಾಗೆ ತೆರಳಿತ್ತು.