ನವದೆಹಲಿ, ಜೂ.04 (DaijiworldNews/HR): ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಮೇರಿಕಾ ಭಾರತಕ್ಕೆ ಲಸಿಕೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದು, ಈ ಸಂಬಂಧ ಅಮೇರಿಕಾ ಉಪಾಧ್ಯಕ್ಷೆ ಭಾರತ ಮೂಲದ ಕಮಲಾ ಹ್ಯಾರಿಸ್ ಪ್ರಧಾನಿ ಮೋದಿ ಜತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಧಾನಿ ಮೋದಿ, "ದೇಶಕ್ಕೆ ಈ ತಿಂಗಳ ಕೊನೆಯಲ್ಲಿ ಮೊದಲ ಬ್ಯಾಚ್ ಅಮೇರಿಕ ಸರ್ಕಾರ, ವ್ಯವಹಾರಗಳು ಹಾಗೂ ಭಾರತೀಯ ಮೂಲದವರು ಸೇರಿ ಎಲ್ಲರೂ ಕೊರೊನಾ ವಿರುದ್ಧ ಹೋರಾಡಲು ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ದೇಶದ ಪರವಾಗಿ ಒಟ್ಟಾಗಿ ನಿಂತಿದ್ದಕ್ಕೆ ಕಮಲಾ ಹ್ಯಾರಿಸ್ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ" ಎಂದರು.
"ಜಾಗತಿಕ ಲಸಿಕೆ ಹಂಚಿಕೆಗಾಗಿ ಅಮೆರಿಕದ ಸ್ಟ್ರಾಟಜಿ ಭಾಗವಾಗಿ ಭಾರತಕ್ಕೆ ಲಸಿಕೆ ಸರಬರಾಜು ನೀಡುವ ಭರವಸೆಯನ್ನು ನಾನು ಆತ್ಮೀಯವಾಗಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಯುಎಸ್ ಸರ್ಕಾರ, ವ್ಯವಹಾರಗಳು ಮತ್ತು ಭಾರತೀಯ ವಲಸೆಗಾರರ ಎಲ್ಲ ಬೆಂಬಲ ಮತ್ತು ಒಗ್ಗಟ್ಟಿಗೆ ನಾನು ಅವರಿಗೆ ಧನ್ಯವಾದ ಅರ್ಪಿಸಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನು ಅಮೇರಿಕಾವೇ ಲಸಿಕೆ ನೀಡುವ ತೀರ್ಮಾನವನ್ನು ತೆಗೆದುಕೊಂಡಿದ್ದು, ಕಮಲಾ ಹ್ಯಾರಿಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.