ನವದೆಹಲಿ, ಜೂ.04 (DaijiworldNews/HR): ಶಿಕ್ಷಣ ಸಚಿವಾಲಯವು ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಹವ್ಯಾಸಗಳು ಮತ್ತು ಅಧ್ಯಯನದ ಬಗ್ಗೆ ಸಮಾಲೋಚನೆ ನಡೆಸಿ, 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿರುವುದಕ್ಕೆ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಪ್ರಧಾನಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಇನ್ನು ಪ್ರಧಾನಿಯೊಂದಿಗೆ ಮಾತನಾಡಿದ ಬೆಂಗಳೂರಿನ ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಅಭಿರಾಮ್, "ಅಧ್ಯಯನದೊಂದಿಗೆ ಪ್ರತಿ ದಿನ 30 ನಿಮಿಷ ಯೋಗ ಮಾಡುತ್ತೇನೆ’ ಎಂದಿದ್ದಾರೆ.
ಬೆಂಗಳೂರಿನ ಮತ್ತೊಬ್ಬ ವಿದ್ಯಾರ್ಥಿ ನಂದನ್ ಹೆಗಡೆ ಮಾತನಾಡಿ, ‘12ನೇ ತರಗತಿ ಪರೀಕ್ಷೆ ರದ್ದು ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಇದೊಂದೇ ಕೊನೆಯ ಪರೀಕ್ಷೆ ಅಲ್ಲ. ಇನ್ನೂ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಆರೋಗ್ಯವೇ ಮುಖ್ಯ" ಎಂದು ಹೇಳಿದರು.
ಇನ್ನು ಕೆಲವು ಪೋಷಕರು ಕೂಡ ಕಾಲೇಜು ಪ್ರವೇಶದ ಬಗ್ಗೆಯೂ ಸಭೆಯಲ್ಲಿ ವಿವರಿಸಿದರು.