ಬದ್ಲಾಪುರ, ಜೂ.04 (DaijiworldNews/HR): ಅನಿಲ ಸೋರಿಕೆಯಾಗಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬದ್ಲಾಪುರದ ರಾಸಾಯನಿಕ ಕಾರ್ಖಾನೆಯಲ್ಲಿ ನಡೆದಿದೆ.
ಆಪ್ಟೆವಾಡಿ ಪ್ರದೇಶದ ಶಿರಗಾಂವ್ ಎಂಐಡಿಸಿಯಲ್ಲಿರುವ ನೊಬೆಲ್ ಇಂಟರ್ ಮೀಡಿಯೇಟ್ಸ್ ಪ್ರೈವೇಟ್ ಎಂಬ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ 10:22ರ ಸುಮಾರಿಗೆ ಈ ಘಟನೆ ನಡೆದಿದೆ. .
ಇನ್ನು ಈ ಪ್ರದೇಶದ ಜನರು ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದ್ದು, 'ಬದ್ಲಾಪುರ ಪೂರ್ವ ಶಿರ್ಗಾಂವ್ ಕಟ್ರಾಪ್ ಪ್ರದೇಶದ ನಿವಾಸಿಗಳು ಪ್ರಮುಖ ಅನಿಲ ಹೊರಸೂಸುವಿಕೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಿದ ತಕ್ಷಣ, ಅಗ್ನಿಶಾಮಕ ದಳ ವು ಕಾರ್ಖಾನೆಗೆ ಧಾವಿಸಿ ಸೋರಿಕೆಯನ್ನು ನಿಲ್ಲಿಸಲಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.