ಬೆಂಗಳೂರು, ಜೂ. 03 (DaijiworldNews/SM): ಗೂಗುಲ್ ಸಂಸ್ಥೆಯು ಕನ್ನಡ ಭಾಷೆಗೆ ಅವಮಾನ ಮಾಡಿದೆ ಎನ್ನುವ ವಿಚಾರಕ್ಕೆ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಪ್ರತಿಕ್ರಿಯೆ ನೀಡಿದ್ದು, ಗೂಗುಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಲಿಂಬಾವಳಿಯವರು ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ. ಸಚಿವ ಲಿಂಬಾವಳಿ, ಪ್ರತಿಷ್ಠಿತ ಗೂಗಲ್ ಮಾತ್ರವಲ್ಲ ಬೇರೆ ಯಾರೇ ಆಗಲಿ ಕನ್ನಡ ಭಾಷೆಯನ್ನು ಅವಮಾನ ಮಾಡುವ ಅಧಿಕಾರ ಹೊಂದಿಲ್ಲ. ಕನ್ನಡದ ಬಗ್ಗೆ ಯಾರೇ ಗೌರವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಗೂಗಲ್ ನಲ್ಲಿ ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂದು ಸರ್ಚ್ ಮಾಡಿದಾಗ ಉತ್ತರ ಕನ್ನಡ ಎಂದು ಬರುತ್ತದೆ. ಇದರ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.