ಮೈಸೂರು, ಜೂ. 03 (DaijiworldNews/SM): ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ಜೂನ್ 03ರ ಗುರುವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳದ ಆರೋಪ ಮಾಡಿ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಿಲ್ಪಾ ನಾಗ್, ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ನಗರದಲ್ಲಿ ಹೊಸ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಕೋವಿಡ್ -19 ಪ್ರಕರಣಗಳನ್ನು ಮೈಸೂರು ಸಿಟಿ ಕಾರ್ಪೊರೇಶನ್ನ ಮಿತಿಗೆ ತರಲು ಸಿಟಿ ಕಾರ್ಪೊರೇಷನ್ ಕೆಲಸ ಮಾಡಿದೆ. ಐಎಎಸ್ ಅಧಿಕಾರಿಯಾಗಿ ನನಗೆ ನೆಮ್ಮದಿ ಇಲ್ಲ. ನಮ್ಮ ಅಧಿಕಾರಿಗಳನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ನಾನು ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
"ಉತ್ತಮವಾಗಿ ಕೆಲಸ ಮಾಡಿದರೂ ಟೀಕೆಗಳು ಬರುತ್ತಿದೆ. ಜಿಲ್ಲಾಧಿಕಾರಿ ಅವರು ನನ್ನನ್ನು ತುಳಿಯುವ ಪಿತೂರಿ ನಡೆಸಿದ್ದಾರೆ". ಪ್ರಸ್ತುತ ತನಗೆ ಕೆಲಸ ಮಾಡಲು ಅನುಕೂಲಕರ ವಾತಾವರಣವಿಲ್ಲ ಎಂದು ಶಿಲ್ಪಾ ನಾಗ್ ಆರೋಪಿಸಿದ್ದಾರೆ. ಈ ಹಿಂದೆ ಡಿಸಿ ಶಿಲ್ಪಾನಾಗ್ ಅವರ ವಿರುದ್ಧ ಜನನಾಯಕರು ಆರೋಪ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಸ್ವತಃ ಅಧಿಕಾರಿಗಳು ಕೂಡ ಆರೋಪ ಮಾಡಿದ್ದಾರೆ.