ಬೆಂಗಳೂರು, ಜೂ.03 (DaijiworldNews/HR): ಕರ್ನಾಟಕದಲ್ಲಿ ಜೂನ್ 7ರ ಬಳಿಕ ಮತ್ತೆ ಲಾಕ್ಡೌನ್ ವಿಸ್ತರಣೆಗೊಳಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, "ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ಹರಡುವಿಕೆ ಮುಂದುವರೆದಿರುವುದರಿಂದ ಜೂನ್ 14ರ ವರೆಗೆ ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆಗೊಳಿಸಲಾಗಿದೆ" ಎಂದರು.
ರಾಜ್ಯಕ್ಕೆ 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ ಮಾಡಲಾಗುತ್ತಿದ್ದು, ಜೂನ್ 7ರಿಂದ ಶೇ.30ರಷ್ಟು ಕೊರೊನಾ ವರ್ತನೆ ಪಾಲಿಸಿ ತೆರೆಯಲು ಅನುಮತಿಸಲಾಗಿದ್ದು, ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೂರದಂತೆ ಮೂರು ಸಾವಿರ ಪರಿಹಾರ ನೀಡಲಾಗುತ್ತದೆ. ಚಲನ ಚಿತ್ರ, ದೂರು ದರ್ಶನ ಮಾಧ್ಯಮಿತ್ರಿಗೆ 3 ಸಾವಿರ ನೀಡಲಾಗುತ್ತದೆ. ಮೀನುಗಾರರಿಗೆ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೊಂದಾಯಿಸಿದಂತ ಮೀನುಗಾರರಿಗೆ ತಲಾ 3 ಸಾವಿರ, ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ಮೂರು ಸಾವಿರ ನೀಡಲಾಗುತ್ತದೆ ಎಂದಿದ್ದಾರೆ.
ಇನ್ನು ಮುಜುರಾಯಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಗೆ ಸಿ ವರ್ಗದ ದೇವಸ್ಥಾನದಲ್ಲಿ ಕೆಲಸ ಮಾಡುವವರಿಗೆ ತಲಾ ಮೂರು ಸಾವಿರ ನೀಡಲು ನಿರ್ಧಾರ ಮಾಡಲಾಗಿದ್ದು, ಮಸೀದಿಯಲ್ಲಿನ ಪೇಜಿಸಿಮೋಗಳಿಗೂ ತಲಾ ಮೂರು ಸಾವಿರ ಕೊಡಲಾಗುವುದು ಎಂದರು.
ಆಶಾ ಕಾರ್ಯಕರ್ತರಿಗೂ ಮೂರು ಸಾವಿರ ನೀಡಲಿದ್ದು, ಇದರಿಂದ 42574 ಕಾರ್ಯಕರ್ತೆಯರಿಗೆ ಸಹಾಯ ಆಗಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ನೀಡಲಾಗುತ್ತದೆ ಎಂದರು.
ಇನ್ನು ಎಲ್ಲಾ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದ್ದು, ಅನುಧಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ. ನ್ಯಾಯವಾಧಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.