ಬೆಂಗಳೂರು, ಜೂ.03 (DaijiworldNews/HR): ಗೂಗಲ್ ಸರ್ಚ್ನಲ್ಲಿ ಅಗ್ಲಿ ಲಾಂಗ್ವೇಜ್(ಕೊಳಕು ಭಾಷೆ ) ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಉತ್ತರವನ್ನು ವೆಬ್ಸೈಟ್ ಒಂದು ನೀಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಗೂಗಲ್ ಸರ್ಚ್ ಪೇಜ್ನಲ್ಲಿ ಕ್ಷಣಕಾಲ ಕೆಟ್ಟ ಭಾಷೆ ವಿಚಾರ ಟ್ರೆಂಡ್ ಕೂಡ ಆಗಿದ್ದು, ಸಾವಿರಾರು ಕನ್ನಡಿಗರು ಗೂಗಲ್ ಪೇಜ್ನಲ್ಲಿ ಪ್ರದರ್ಶಿತವಾಗಿದ್ದ ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಜನರ ಆಕ್ರೋಶಕ್ಕೆ ಮಣಿದ ಗೂಗಲ್, ಅಲ್ಲಿದ್ದ ಪುಟವನ್ನು ತೆಗೆದುಹಾಕಿದೆ ಎನ್ನಲಾಗಿದೆ.
ವಿವಿಧ ತಾಣಗಳಲ್ಲಿ ಕೂಡ ಈ ಸಂಗತಿ ಚರ್ಚೆಯಾಗಿದ್ದು, ಜಗತ್ತಿನಲ್ಲಿ ಕೆಟ್ಟ ಭಾಷೆಯೆಂಬುದಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೆಬ್ಪುಟಕ್ಕೆ ಹೆಚ್ಚಿನ ಜನರನ್ನು ಸೆಳೆಯುವ ತಂತ್ರ ಮತ್ತು ಟ್ರೆಂಡ್ ಆಗುವ ಉದ್ದೇಶದಿಂದ ಇಂತಹ ತಪ್ಪು ಮಾಹಿತಿ ನೀಡಿ ವಿವಾದ ಸೃಷ್ಟಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಗೂಗಲ್ ವಿರುದ್ಧ ಆಕ್ರೋಶ ಕೂಡ ಹೊರಹಾಕುತ್ತಿದ್ದು, ಕನ್ನಡಿಗರ ಅಭಿಮಾನವನ್ನು ಕೆಣಕಿದ್ರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿಯೂ ಎಚ್ಚರಿಕೆ ನೀಡಿದ್ದಾರೆ.