ಬೆಂಗಳೂರು, ಜೂ 3(DaijiworldNews/MS): ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಕೇರಳ ರಾಜ್ಯ ಸಾರಿಗೆ ಸಂಸ್ಥೆಗಳೆರಡೂ , "ಕೆಎಸ್ಆರ್ಟಿಸಿ " ಎಂದು ಸಂಕ್ಷಿಪ್ತ ಪದವನ್ನು ಬಳಸುತ್ತಿದ್ದು ಆದರೆ ಇನ್ನು ಕರ್ನಾಟಕವೂ ಕೆಎಸ್ಆರ್ಟಿಸಿ ಅಂತ ಬಳಸುವಂತಿಲ್ಲ ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ(ಟ್ರೇಡ್ ಮಾರ್ಕ್ ರಿಜಿಸ್ಟಿ) ಅಂತಿಮ ತೀರ್ಪು ನೀಡಿದೆ. ಈ ಮೂಲಕ ಕೆಎಸ್ಆರ್ಟಿಸಿ ಹೆಸರು ಕೇರಳ ಪಾಲಾಗಿದೆ.
ರ್ನಾಟಕ ಮತ್ತು ಕೇರಳ ನಡುವೆ ಹಲವು ವರ್ಷಗಳಿಂದಲೂ ಕೆಎಸ್ಆರ್ಟಿಸಿಗಾಗಿ ಕಾನೂನು ಸಮರ ನಡೆಸುತ್ತಾ ಬಂದಿದ್ದು ಇದೀಗ ಟ್ರೇಡ್ ಮಾರ್ಕ್ ರಿಜಿಸ್ಟಿ ಅಂತಿಮ ತೀರ್ಪು ನೀಡುವುದರ ಮೂಲಕ ಇದಕ್ಕೆ ಬ್ರೇಕ್ ಬಿದ್ದಿದೆ. ಇದರೊಂದಿಗೆ " ಆನ ವಂಡಿ" ಲಾಂಛನವೂ ಕೇರಳದ ಪಾಲಾಗಿದೆ.
ಕೆಎಸ್ಆರ್ಟಿಸಿ ಪದದಿಂದ ಹಲವು ಬಾರಿ ಉಭಯ ರಾಜ್ಯಗಳಲ್ಲಿ ಪ್ರಯಾಣಿಕರಿಗೆ ಗೊಂದಲಮೂಡುತ್ತಿತ್ತು. ಆನ್ ಲೈನ್ ಬುಕ್ಕಿಂಗ್ ವೇಳೆ ರಾಜ್ಯಗಳು ಬದಲಿ ತೋರಿಸಿಸುತ್ತಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಅನ್ನು ತಾನು ಮಾತ್ರ ಬಳಸಲು ಅವಕಾಶ ನೀಡುವಂತೆ ಕೋರಿ 2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋದಂಣಿ ಪ್ರಾಧಿಕಾರದ ಮೆಟ್ಟಿಲೇರಿತ್ತು. ಇದಕ್ಕೆ ಪ್ರತಿಯಾಗಿ ಕೇರಳ ಸಹ ಪ್ರತಿದೂರು ಸಲ್ಲಿಸಿತ್ತು.
1948ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ(ಎಂಜಿಆರ್ಟಿಡಿ) ಎಂದು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ಆರ್ಟಿಸಿ ಪದ ಬಳಕೆ ಚಾಲ್ತಿಗೆ ಬಂದಿತ್ತು. ಇನ್ನು ಅತ್ತ ಕೇರಳದಲ್ಲೂ ಕೆಎಸ್ಆರ್ಟಿಸಿಗೂ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ(ಟಿಎಸ್ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಗಿತ್ತು. ಇದನ್ನು ಮುಂದಿಟ್ಟುಕೊಂಡು ಕೇರಳ ವಾದ ಮಂಡಿಸಿ ಸಮರದಲ್ಲಿ ಯಶಸ್ವಿಯಾಗಿದೆ.
ತೀರ್ಪಿನ ಹಿನ್ನಲೆಯಲ್ಲಿ ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್ಟಿಸಿ ಅಂತ ಬಳಸಬೇಕು. ಅಲ್ಲದೆ ಕರ್ನಾಟಕ ರಾಜ್ಯದ ಸಾರಿಗೆ ಬಸ್ ಮತ್ತು ಇತರ ಕಡೆ ನೋಂದಾಯಿಸಿದ್ದ, ಪ್ರಕಟನೆ ಬೋರ್ಡ್ ಎಲ್ಲ ಲೋಗೋ ಮತ್ತು ಚಿತ್ರಗಳನ್ನು ತೆಗೆಯಬೇಕಾಗುತ್ತದೆ.