ನವದೆಹಲಿ, ಜೂ. 02 (DaijiworldNews/SM): ಕೊರೋನಾಗೆ ಸಂಬಧಿಸಿದ ಲಸಿಕೆಗಳ ಮಾಹಿತಿ ಹಾಗೂ ವಿವರಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಫುಟ್ನಿಕ್ ವಿ ಒಳಗೊಂಡಂತೆ ದೇಶದಲ್ಲಿನ ಎಲ್ಲಾ ಕೊರೊನಾ ಲಸಿಕೆಗಳ ಸಂಬಂಧಿಸಿದಂತೆ ಇಲ್ಲಿಯ ತನಕದ ವಿವರವನ್ನು ನೀಡಬೇಕು. ಆರಂಭದಿಂದಲೂ ಯಾವೆಲ್ಲಾ ಕ್ರಮ ವಹಿಸಲಾಗಿದೆ ಎನ್ನುವುದನ್ನು ಬಹಿರಂಗಗೊಳಿಸಬೇಕೆಂದು ತಿಳಿಸಿದ್ದಾರೆ.
ಆರಂಭದಿಂದ ಇಲ್ಲಿಯವರೆಗಿನ ವಿವರವಾದ ವರದಿಯನ್ನು ನೀಡಬೇಕು. ಅಲ್ಲದೆ, ಕೇಂದ್ರ ಸರಕಾರದ ಲಸಿಕಾ ನೀತಿಯ ಪ್ರಕಾರ ಎಲ್ಲಾ ದಾಖಲೆಗಳನ್ನು ಹಾಗೂ ವಿವರಗಳನ್ನು ಹಂಚಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಇನ್ನುಳಿದಂತೆ ಲಸಿಕೆಗಳ ಕುರಿತು ನಿರ್ದಿಷ್ಟ ದಿನಾಂಕಗಳನ್ನು ಉಲ್ಲೇಖಿಸಬೇಕು. ಬೇಡಿಕೆಯಿಟ್ಟ ದಿನ, ಖರೀದಿಸಿದ ದಿನ, ಸರಬರಾಜು ಮಾಡಿದ ಎಲ್ಲಾ ಲಸಿಕೆಗಳ ವಿವರವನ್ನು ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ತಾಕಿತು ಮಾಡಿದೆ.