ನವದೆಹಲಿ, ಜೂ 02 (DaijiworldNews/MS): "ಒಂದು ವಾರದಲ್ಲಿ ಪಾಸಿಟಿವಿಟ್ ದರ ಶೇಕಡಾ 5 ಕ್ಕಿಂತ ಕಡಿಮೆ ಇರಬೇಕು , 45ಕ್ಕಿಂತ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆ ಉಳ್ಳ ಜನರ ಶೇಕಡಾ 70 ರಷ್ಟು ವ್ಯಾಕ್ಸಿನೇಷನ್ ಆಗಿರಬೇಕು , ಮತ್ತು ಕೋವಿಡ್-ನಿಯಂತ್ರಣಕ್ಕೆ ಸಮುದಾಯಗಳ ಮುಂಚೂಣಿ " ಇದು ಕೇಂದ್ರವೂ ಜಿಲ್ಲೆಗಳಲ್ಲಿ ಪ್ರಮುಖ ಅನ್-ಲಾಕ್ಡೌನ್ ಮಾನದಂಡವಾಗಿದೆ.
ದೇಶದಲ್ಲಿ 2ನೇ ಅಲೆಯ ಸೋಂಕು ಸಂಖ್ಯೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಾಗಿದೆ. ಸಂಭವನೀಯ ಮೂರನೇ ಅಲೆಯ ಮುಂದಿರುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ ಡೌನ್ ಹಂತಹಂತವಾಗಿ ತೆರವುಗೊಳಿಸಬೇಕಾಗುತ್ತದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ದೃಢೀಕರಿಸಲು ಆಯಾ ಪ್ರದೇಶದಲ್ಲಿ 2 ವಾರಗಳ ಮುನ್ನ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಆಗಿರಬೇಕು ಎಂದು ಡಬ್ಲ್ಯುಎಚ್ಒ ನಿಯಮ ಇದೆ. ಹೀಗಾಗಿ ಜಿಲ್ಲೆಗಳಲ್ಲಿ ಸದ್ಯ ಘೋಷಣೆ ಮಾಡಿರುವ ಕೊರೊನಾ ಪ್ರತಿಬಂಧಕ ಕ್ರಮಗಳನ್ನು ತೆರವುಗೊಳಿಸುವ ಮುನ್ನ ಈ ಅಂಶದ ಬಗ್ಗೆ ಗಮನ ನೀಡಬೇಕು ಎಂದು ಸೂಚಿಸಲಾಗಿದೆ. ಮೂರನೇ ತರಂಗವನ್ನು ತಡೆಗಟ್ಟುವ ದೃಷ್ಟಿಯಿಂದ, ಶೇಕಡಾ 5 ಕ್ಕಿಂತ ಕಡಿಮೆ ಸಕಾರಾತ್ಮಕತೆಯನ್ನು ಹೊಂದಿರುವ ಜಿಲ್ಲೆಗಳು ಸ್ವಲ್ಪಮಟ್ಟಿಗೆ ತೆರೆದುಕೊಳ್ಳಬಹುದಾಗಿದೆ. ಲಸಿಕೆ ವಿತರಣೆ ಪೂರ್ತಿಯಾಗಿರುವುದರ ಜತೆಗೆ ಸೋಂಕು ನಿಯಂತ್ರಣಕ್ಕೆ ಬರುವಂತಾಗಲು ಸಮು ದಾಯಗಳೇ ತಮ್ಮ ವ್ಯಾಪ್ತಿಯಲ್ಲಿ ಪ್ರತಿಬಂಧಕ ಕ್ರಮಗಳನ್ನು ಆದ್ಯತೆ ಮತ್ತು ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಲು ಮುಂದಾಗಬೇಕು ಎಂದು ಸರಕಾರ ಪ್ರತಿಪಾದಿಸಿದೆ.