ನವದೆಹಲಿ,ಜೂ.01 (DaijiworldNews/HR): ಕೊರೊನಾದಿಂದ ಮೃತಪಟ್ಟವರ ಶವಗಳನ್ನು ನಾಯಿಗಳು ತಿನ್ನುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಉತ್ತರಾಖಂಡದ ಉತ್ತರಕಾಶಿಯ ಕೇದಾರ್ ಘಾಟ್ ನದಿ ತೀರದ ಪ್ರದೇಶದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಅನಾಥ ಶವಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲೆಯ ಅಧಿಕಾರಿಗಳಲ್ಲಿ ಸ್ಥಳೀಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕಳೆದ ಕೆಲವು ದಿನಗಳ ಕಾಲ ಭಾರೀ ಮಳೆಯಾದ ಬಳಿಕ ನದಿ ತೀರದ ಮರಳಿನಲ್ಲಿ ಸಿಲುಕಿಕೊಂಡಿದ್ದ ಶವಗಳು ದಡಕ್ಕೆ ಬಂದು ಬಿದ್ದ ಪರಿಣಾಮ ವಾಸನೆ ಬರುತ್ತಿರುವುದರಿಂದ ನಾಯಿಗಳು ದೇಹಗಳನ್ನು ತಿನ್ನಲು ಆರಂಭಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಉತ್ತರಪ್ರದೇಶ ಮತ್ತು ಬಿಹಾರದ ನದಿಗಳಲ್ಲಿ ಇತ್ತೀಚೆಗೆ ನೂರಾರು ಕೊರೊನಾ ಸಂತ್ರಸ್ತರ ಶವಗಳು ತೇಲಿ ಬಂದಿದ್ದು, ಶವ ಸಂಸ್ಕಾರದ ಸ್ಥಳದ ಕೊರತೆ ಭಯ, ಕಟ್ಟಿಗೆ, ಅಂತ್ಯಕ್ರಿಯೆ ವೆಚ್ಚಗಳ ಕಾರಣದಿಂದಾಗಿ ಸಂಬಂಧಿಕರು ಶವಗಳನ್ನು ನದಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.