ಬೆಂಗಳೂರು, ಜೂ.01 (DaijiworldNews/HR): ಕರ್ನಾಟಕದಲ್ಲಿ ಕೊರೊನಾದಿಂದ ಗುಣಮುಖರಾದಂತ ಅನೇಕರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ರಾಜ್ಯದಲ್ಲಿ ಇದುವರೆಗೆ 1,370 ಜನರಿಗೆ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿರೋದು ಪತ್ತೆಯಾಗಿ ಇದರಿಂದ 51 ಜನರು ಸಾವನ್ನಪ್ಪಿದ್ದರೇ, 27 ರೋಗಿಗಳು ಬ್ಲ್ಯಾಕ್ ಫಂಗಸ್ ರೋಗದಿಂದಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಕರ್ನಾಟಕದಲ್ಲಿ ಇದುವರೆಗೆ 1,370 ಜನರಿಗೆ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿದ್ದು, ಬ್ಲ್ಯಾಕ್ ಫಂಗಸ್ ನಿಂದಾಗಿ ಈವರೆಗೆ ರಾಜ್ಯದಲ್ಲಿ 51 ರೋಗಿಗಳು ಸಾವನ್ನಪ್ಪಿದ್ದು, 1,292 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಬೆಂಗಳೂರು ನಗರ - 557, ಧಾರವಾಡ - 156, ಕಲಬುರ್ಗಿ - 104, ಬಾಗಲಕೋಟೆ - 70, ವಿಜಯಪುರ - 57, ಬೆಳಗಾವಿ - 47, ರಾಯಚೂರು - 46, ಕೋಲಾರ - 43, ಶಿವಮೊಗ್ಗ 38, ದಕ್ಷಿಣ ಕನ್ನಡ, ಮೈಸೂರು - 35, ಚಿತ್ರದುರ್ಗ - 34, ದಾವಣೆಗೆರ - 26, ಬೆಂಗಳೂರು ಗ್ರಾಮಾಂತರ - 20, ಬೀದರ್ - 18, ಕೊಪ್ಪಳ - 16, ಗದಗ - 11, ಉಡುಪಿ, ತುಮಕೂರು - 10, ಹಾಸನ - 09, ಹಾವೇರಿ - 08, ಬಳ್ಳಾರಿ - 06 ಇಷ್ಟು ಜಿಲ್ಲೆಗಳಲ್ಲಿ ಪ್ರಸ್ತುತ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದಂತವರುಗೆ ಬ್ಲ್ಯಾಕ್ ಫಂಗಸ್ ಶಾಕ್ ನೀಡಿದ್ದು, ಚಿಕಿತ್ಸೆಗಾಗಿ ಔಷಧಿಯ ಕೊರತೆ ಕೂಡ ಇದೆ ಎನ್ನಲಾಗುತ್ತಿದೆ.